ಯಾದಗಿರಿ: ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ವಿಶ್ವನಾಥ ಅಲ್ಲೂರು ಅವಿರೋಧ ಆಯ್ಕೆ

ಯಾದಗಿರಿ: ರೈತರ ಸೇವಾ ಸಹಕಾರ ಸಂಘ ನಿಯಮಿತ ಸಂಘದ ಅಧ್ಯಕ್ಷರಾಗಿ ವಿಶ್ವನಾಥ ಅಲ್ಲೂರು ಅಬ್ಬೆತುಮಕೂರ ಹಾಗೂ ಉಪಾಧ್ಯಕ್ಷರಾಗಿ ಖಂಡಪ್ಪ ಕೌಳೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಾದ ಪ್ರಶಾಂತ ಚಿನ್ನಕಾರ ಘೋಷಣೆ ಮಾಡಿದರು.
ಸಂಘದ ಕಛೇರಿಯಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ ಅಲ್ಲೂರು ಅಬ್ಬೆತುಮಕೂರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಖಂಡಪ್ಪ ಕೌಳೂರು ಮಾತ್ರ ಏಕೈಕ ಅಭ್ಯರ್ಥಿಗಳಾಗಿ ಚುನಾವಣಾಧಿಕಾರಿಗಳಿಗೆ ಅವರಿಗೆ ನಾಮಪತ್ರ ಸಲ್ಲಿಸಿದರು.
ತದನಂತರ ನಾಮಪತ್ರ ಪರಿಶೀಲನೆ ಮಾಡಿ ಈ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಸಭೆಯಲ್ಲಿ ಘೋಷಿಸಿದರು.
ಸಂಘದ ನೂತನ ಅಧ್ಯಕ್ಷ ವಿಶ್ವನಾಥ ಅಲ್ಲೂರು ಅಬ್ಬೆತುಮಕೂರ ಮಾತನಾಡಿ ನಮ್ಮ ಸಂಘವು ಉತ್ತಮವಾಗಿ ಕೆಲಸ ಮಾಡಿ ಜಿಲ್ಲೆಯಲ್ಲಿಯೇ ಈ ಹಿಂದೆ ಅತ್ಯುತ್ತಮ ಸಹಕಾರ ಸಂಘ ಎಂದು ಪ್ರಶಸ್ತಿಗೆ ಭಾಜನವಾಗಿ ಉನ್ನತ ಸ್ಥಾನದಲ್ಲಿದೆ, ನಾನು ಕೂಡ ಎಲ್ಲರ ಸಹಕಾರದಿಂದ ಸರ್ಕಾರದ ಯೋಜನೆಗಳ ಲಾಭ ರೈತರಿಗೆ ಹಾಗೂ ಮಹಿಳಾ ಸ್ವ-ಸಹಾಯ ಸಂಘಗಳಿಗೆ ತಲುಪಿಸುವ ಮೂಲಕ ಸಂಘವನ್ನು ಆರ್ಥಿಕವಾಗಿ ಸದೃಢವಾಗಿ ಬಲಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ವೈಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಶಿವರಾಜ ಪಾಟೀಲ ಸಹಕಾರ ಸಂಘದ ನಿರ್ದೇಶಕರಾದ ಸಿದ್ದಪ್ಪ ಎಸ್ ಹೊಟ್ಟಿ, ಹಣಮಂತ ರೆಡ್ಡಿ, ಮಲ್ಲಿನಾಥ ಆಯರಕರ್, ದೊಡ್ಡಪ್ಪ ದಿಡ್ಡಿಮನಿ, ವೀರಭದ್ರಯ್ಯ ಜಾಕಮಠ, ಶಿವಪ್ಪ ಬಡಿಗೇರ, ಶಿವರಾಜ ಜಕಾತಿ, ತಿಮ್ಮಣ್ಣ ಕಾವಲಿ, ನಿಲ್ಲಮ್ಮ ಪಾಟೀಲ್, ನಿಂಗಮ್ಮ ಮತ್ತು ಆರ್ ಮಾಹದೇವಪ್ಪಗೌಡ ಅಬ್ಬೆತುಮಕೂರ, ಬಸವರಾಜ ಖಂಡ್ರೆ ಅಬ್ಬೆತುಮಕೂರ, ಸಂಘದ ಕಾರ್ಯದರ್ಶಿ ಬನ್ನಯ್ಯ ಸ್ವಾಮಿ, ಸಹಕಾರ ಸಂಘದ ಸಿಬ್ಬಂದಿಗಳಾದ ಭೀಮರೆಡ್ಡಿ ಚಪೇಟ್ಲ, ವಿಶ್ವನಾಥರೆಡ್ಡಿ ಮುದ್ನಾಳ ಇತರರು ಇದ್ದರು







