ಯಾದಗಿರಿ | ನಗರದಲ್ಲಿ 69ನೇ ಧಮ್ಮಚಕ್ರ ಪರಿವರ್ತನಾ ದಿನ ಸರಳವಾಗಿ ಆಚರಣೆ

ಯಾದಗಿರಿ: ನಗರದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ 69ನೇ ಧಮ್ಮಚಕ್ರ ಪರಿವರ್ತನಾ ದಿನವನ್ನು ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಶ್ರೀಮಂತ ಚಿನ್ನಾಕರ್ ಮಾತನಾಡಿ, ಧಮ್ಮಚಕ್ರ ಪ್ರವರ್ತನಾ ದಿನವು ಭಾರತದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಿನವಾಗಿದೆ. 1956ರ ಅಕ್ಟೋಬರ್ 14ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು, ಅದೇ ದಿನದಿಂದ ನಾವು ಅಂಬೇಡ್ಕರ್ ಅನುಯಾಯಿಗಳಾಗಿ ಈ ದಿನವನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ರಾಮಪ್ಪ ಮಾಡಿಗಿ, ಭೀಮಾಶಂಕರ ಈಟೇ, ಬಸವಲಿಂಗಪ್ಪ ಕುರಕುಂಬಳಕರ್, ಮಂಜುನಾಥ ದಾಸನಕೇರಿ, ಭೀಮರಾಯ ಸುಂಗಲಕರ್, (ಡ್ಯಾನಿ) ಸಂಪತ್ ಚಿನ್ನಾಕರ್, ಶ್ರೀಕಾಂತ್ ಸುಂಗಲಕರ್, ಕೇದರನಾಥ ಹುಳ್ಯೆ, ನಾಗರಾಜ್ ಒಡೆಯರ್, ಜಗದೀಶ್ ಚಟ್ಟೇರಕರ್, ಬಸವರಾಜ ದೇವತ್ಗಲ್, ಮಲ್ಲಿಕಾರ್ಜುನ ಕುರಕುಂಬಳಕರ್ ಸೇರಿದಂತೆ ಹಲವರು ಇದ್ದರು.
Next Story





