ಯಾದಗಿರಿ | ಅ.14ರಂದು ಬುದ್ಧ ಭಾವಚಿತ್ರ ಉದ್ಘಾಟನೆ, ಧಮ್ಮಚಕ್ರ ಪ್ರವರ್ತನಾ ದಿನಾಚರಣೆ : ಮಲ್ಲಿಕಾರ್ಜುನ ಎಂ.ಕ್ರಾಂತಿ

ಯಾದಗಿರಿ : ಅಶೋಕನಗರದಲ್ಲಿ ಅ.14 ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ಮಹಾತ್ಮ ಗೌತಮ್ ಬುದ್ಧರ ಭಾವಚಿತ್ರ ಉದ್ಘಾಟನೆ ಹಾಗೂ 69ನೇ ಧಮ್ಮಚಕ್ರ ಪ್ರವರ್ತನಾ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಎಂ.ಕ್ರಾಂತಿ ತಿಳಿಸಿದ್ದಾರೆ.
ಭಂತೆಜಿಗಳ ಸಾನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬೌದ್ಧ ಧರ್ಮದ ತತ್ತ್ವಗಳಾದ ಶಾಂತಿ, ಸಮಾನತೆ ಮತ್ತು ಮಾನವೀಯತೆ ಕುರಿತ ಉಪನ್ಯಾಸಗಳು ನಡೆಯಲಿವೆ.
ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ರಾಯಚೂರು ಲೋಕಸಭಾ ಸದಸ್ಯ ಜಿ.ಕುಮಾರ ನಾಯಕ, ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನ್ಸೂರ, ಯಾದಗಿರಿ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಭಾರತೀಯ ಬೌದ್ಧ ಮಹಾಸಭೆಯ ಉತ್ತರ ಕರ್ನಾಟಕ ರಾಜ್ಯಾಧ್ಯಕ್ಷ ಮನೋಹರ ಮೋರೆ ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ದರ್ಶನ ಬಿ. ಸೋಮಶೇಖರ ಸೇರಿದಂತೆ ಗಣ್ಯರು ಹಾಜರಾಗಲಿದ್ದಾರೆ.
ಜಿಲ್ಲೆಯಾದ್ಯಂತದ ಎಲ್ಲಾ ಬೌದ್ಧ ಉಪಾಸಕರು ಹಾಗೂ ಉಪಾಸಕಿಯರು ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಪತ್ರಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ.





