ಯಾದಗಿರಿ | ಮಾದಕ ವಸ್ತುಗಳ ಸೇವನೆ ಮಾಡಿ ವಾಹನ ಚಲಾಯಿಸಬೇಡಿ : ಪಿಐ ಶಿವಾನಂದ ಎಂ.ಮರಡಿ

ಯಾದಗಿರಿ/ ಸೈದಾಪುರ: ವಾಹನ ಚಾಲಕರು ಚಾಲನೆ ಸಮಯದಲ್ಲಿ ಮಾದಕ ವಸ್ತುಗಳ ಸೇವನೆ ಮಾಡಿ ವಾಹನ ಚಲಾಯಿಸಿಬೇಡಿ ಎಂದು ಸೈದಾಪುರ ಪೊಲೀಸ್ ಠಾಣೆಯ ಪಿಐ ಶಿವಾನಂದ ಎಂ.ಮರಡಿ ತಿಳಿಸಿದರು.
ಪಟ್ಟಣಕ್ಕೆ ಹತ್ತಿ ತುಂಬಿಕೊಂಡು ಆಗಮಿಸಿದ ಟ್ರಾಕ್ಟರ್, ಬೊಲೇರೋ, ಟೆಂಪೋ ವಾಹನ ಚಾಲಕರನ್ನು ಹಾಗೂ ರೈತರನ್ನು ಒಂದೆಡೆ ಸೇರಿಸಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು.
ವಾಹನ ಚಾಲಕರು, ಯುವಜನತೆ ಮಾದಕ ವಸ್ತುಗಳ ಸೇವನೆಯಿಂದ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುತ್ತವೆ. ನಷೆ, ಅಮಲು ಪದಾರ್ಥಗಳ ಸೇವೆನೆಯ ಸಮಯದಲ್ಲಿ ಅಪರಾಧಗಳ ಹೆಚ್ಚಾಗಿ ನಡೆಯುತ್ತವೆ. ಅಷ್ಟೇ ಅಲ್ಲದೆ ಮಾದಕ ವಸ್ತು ಮಾರಾಟ, ಸಾಗಣೆ, ಹಾಗೂ ಸೇವನೆ ಕೂಡ ಅಪರಾಧವಾಗಿದ್ದು, ನಿದ್ದೆ ಮಂಪರಿನಲ್ಲಿ ಅಮಲು ಪದಾರ್ಥಗಳ ಸೇವನೆ ಮಾಡಿ ವಾಹನಗಳನ್ನು ಚಲಾಯಿಸಬಾರದು, ಚಾಲಕರು ಕಡ್ಡಾಯವಾಗಿ ಪರವಾನಗಿ ತೆಗೆದುಕೊಂಡಿರಬೇಕು ಎಂದರು.
ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎಸ್ಐ ಅಲ್ಲಾಭಕ್ಷ, ಪೊಲೀಸ್ ಪೇದೆ ನೂರಂದು ನೈಕೋಡಿ ಸೇರಿದಂತೆ ಇತರರಿದ್ದರು.
Next Story





