ಯಾದಗಿರಿ | ಬ್ಯಾಂಕ್, ಎಟಿಎಮ್‌ಗಳ ಸಮಗ್ರ ಭದ್ರತೆ, ಸುರಕ್ಷತೆಗೆ ಸೂಚನೆ

ಯಾದಗಿರಿ: ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳನ್ನು ಬರಮಾಡಿಕೊಂಡು ಬ್ಯಾಂಕ್ ಹಾಗೂ ಎ.ಟಿ.ಎಮ್‌ಗಳ ಸಮಗ್ರ ಭದ್ರತೆ, ಸುರಕ್ಷತೆಗೆ ಸಂಬಂಧಿಸಿದಂತೆ ಆರ್.ಬಿ.ಐ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ಹೇಳಿದರು.
ನಗರದ ಯಾದಗಿರಿ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ 2025ರ ಅ.13 ರಂದು ಇತ್ತೀಚಿನ ನಡೆದ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಸಂಯೋಗದೊಂದಿಗೆ ಬ್ಯಾಂಕ್ ಹಾಗೂ ಎ.ಟಿ.ಎಮ್‌ಗಳ ಸಮಗ್ರ ಭದ್ರತೆ ಸುರಕ್ಷತೆ ವಿಷಯಗಳ ಕುರಿತು ಅವರು ಮಾತನಾಡಿದರು.
ಬ್ಯಾಂಕ್ ಹಾಗೂ ಎ.ಟಿ.ಎಮ್‌ಗಳ ಸಮಗ್ರ ಭದ್ರತೆ, ಸುರಕ್ಷತೆಗೆ ಸಂಬಂಧಿಸಿದಂತೆ ಆರ್.ಬಿ.ಐ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಹಾಗೂ ಕಡ್ಡಾಯವಾಗಿ ಜಿಲ್ಲೆಯ ಎಲ್ಲಾ ಬ್ಯಾಂಕ್ ಮತ್ತು ಎ.ಟಿ.ಎಮ್‌ಗಳಿಗೆ ಸಿಸಿಟಿವಿ ಹಾಗೂ ಸೆಕ್ಯೂರಿಟಿ ಗಾರ್ಡ್ಗಳು ನೇಮಕ ಮಾಡಬೇಕು ಎಂದು ತಿಳಿಸಿದರು.
ಬ್ಯಾಂಕ್ ವ್ಯವಸ್ಥಾಪಕರುಗಳಿಗೆ ನಿರ್ದೇಶನ ನೀಡಲಾಯಿತು, ಹಾಗೂ ಬ್ಯಾಂಕ್ ಎ.ಟಿ.ಎಮ್‌ಗಳ ಭದ್ರತೆ ಹಾಗೂ ಸುರಕ್ಷತೆಗೆ ಸಂಬಂಧಿಸಿದ ಇನ್ನಿತರ ವಿಷಯಗಳ ಕುರಿತು ಚರ್ಚಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಯಾದಗಿರಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಯಾದಗಿರಿ ಸೊಸೈಟಿ ಸಂಘಗಳ ಉಪ ನಿಬಂಧಕರು, ಬ್ಯಾಂಕ ವ್ಯವಸ್ಥಾಪಕರು, ಸಿಬ್ಬಂದಿಗಳು, ಇನ್ನಿತರರು ಉಪಸ್ಥಿತರಿದ್ದರು.







