ಯಾದಗಿರಿ | ಶಾಲಾ ವಿದ್ಯಾರ್ಥಿನಿಯರಿಗೆ ಮಾಸಿಕ ನೈರ್ಮಲ್ಯ ಜಾಗೃತಿ, ಸ್ಯಾನಿಟರಿ ಪ್ಯಾಡ್ ವಿತರಣೆ

ಯಾದಗಿರಿ: ಸ್ಮೈಲ್ ಫೌಂಡೇಶನ್, MSD ಯಾದಗಿರಿ ಹಾಗೂ ಶಿಕ್ಷಣ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ವಡಗೇರಾ ತಾಲ್ಲೂಕಿನ ಹಲಾಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಸಿಕ ನೈರ್ಮಲ್ಯ ಜಾಗೃತಿ ಮತ್ತು ಪ್ಯಾಡ್ ವಿತರಣೆ ಕಾರ್ಯಕ್ರಮ ನಡೆಯಿತು.
ಶಾಲೆಯ ಮುಖ್ಯೋಪಾಧ್ಯಾಯ ನರೇಂದ್ರ ಜೋಶಿ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿನಿಯರ ಆರೋಗ್ಯ ರಕ್ಷಣೆಗೆ ಇಂತಹ ಜಾಗೃತಿ ಕಾರ್ಯಕ್ರಮಗಳು ಅತ್ಯಂತ ಅವಶ್ಯಕ ಎಂದು ಹೇಳಿದರು.
MSD ಸ್ಮೈಲ್ ಫೌಂಡೇಶನ್ ವೈದ್ಯಾಧಿಕಾರಿ ಡಾ.ಯಲ್ಲಪ್ಪ ಕೃಷ್ಣಪ್ಪ ಆದಿನ್ ಅವರು, ಸ್ಯಾನಿಟರಿ ಪ್ಯಾಡ್‌ಗಳನ್ನು ನಿಯಮಿತವಾಗಿ ಬದಲಾಯಿಸುವುದು, ಕೈ ತೊಳೆಯುವುದು ಹಾಗೂ ತ್ಯಾಜ್ಯ ವಿಲೇವಾರಿ ಮಾಡುವ ಸರಿಯಾದ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಇದರಿಂದ ಸೋಂಕು ತಡೆಗಟ್ಟಲು, ಆರೋಗ್ಯ ಕಾಪಾಡಲು ಹಾಗೂ ಮುಟ್ಟಿನ ಸುತ್ತಲಿನ ಕಳಂಕ ಕಡಿಮೆ ಮಾಡಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೋಜನಾ ಸಂಯೋಜಕ ಅಬ್ದುಲ್ ಶಫೀ ಅಹ್ಮದ್ ವಹಿಸಿದ್ದರು. ಸಮುದಾಯ ಸಂಚಾಲಕಿ ನಾಗಮ್ಮ ಹಾಗೂ ಎಎನ್‌ಎಮ್ ಅಶ್ವಿನಿ ಪ್ರಾತ್ಯಕ್ಷಿಕೆ ನೀಡಿದರು.
ಸಹಾಯಕ ಶಿಕ್ಷಕರಾದ ತಾಯಮ್ಮ, ರೇಣುಕಾ, ಪವನ್‌ಕುಮಾರ್, ವೆಂಕಟೇಶ್ ಹಾಗೂ MSD ಪ್ರತಿನಿಧಿ ವಿನೋದ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಯಿತು.





