ಯಾದಗಿರಿ | ವಾರದಲ್ಲಿ 5 ದಿನಗಳ ಕೆಲಸ ಜಾರಿಗೆ ಒತ್ತಾಯಿಸಿ ಮುಷ್ಕರ

ಯಾದಗಿರಿ : ರಾಷ್ಟ್ರವ್ಯಾಪಿ ಬ್ಯಾಂಕ್‌ಗಳ ಮುಷ್ಕರ ಹಾಗೂ ಕೆಜಿಬಿ ಒಕ್ಕೂಟಗಳ ಜಂಟಿ ವೇದಿಕೆ ನೀಡಿದ್ದ ಮುಷ್ಕರ ಕರೆಗೆ ಬೆಂಬಲವಾಗಿ, ಯಾದಗಿರಿ ಜಿಲ್ಲೆಯಾದ್ಯಂತ ಕರ್ನಾಟಕ ಗ್ರಾಮೀಣ ಬ್ಯಾಂಕ್ (ಕೆಜಿಬಿ) ನೌಕರರು ಮತ್ತು ಸಿಬ್ಬಂದಿ ವರ್ಗ ಮಂಗಳವಾರ ಬೆಳಗ್ಗೆಯಿಂದ ಮುಷ್ಕರ ನಡೆಸಿದರು.
ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳಾದ ವಾರಕ್ಕೆ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ತಕ್ಷಣ ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒಕ್ಕೊರಲಿನಿಂದ ಆಗ್ರಹಿಸಿದರು.
ಮುಷ್ಕರದ ವೇಳೆ “ಏಕತೆ ನಮ್ಮ ಶಕ್ತಿ, ಗೆಲವು ನಮ್ಮ ಗುರಿ” ಎಂಬ ಘೋಷಣೆಗಳನ್ನು ಕೂಗಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಷ್ಕರದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಾರ್ಯಾಧ್ಯಕ್ಷ ಸಂಜೀವ್ ಕುಮಾರ ರಾವೂರ, ಎಜಿಸ್ ಸೂರ್ಯಕಾಂತ ಶಿವಪುರ, ಶಿವಕಾಂತ್ ಬಿರಾದಾರ, ಸುಭಾಶ್ಚಂದ್ರ, ವರುಣ ಕುಮಾರ, ಶಶಿಕಾಂತ್, ಅಶೋಕಕುಮಾರ ಸಾಹು, ಷಣ್ಮುಖ ದುಂಪಲ, ವಿಶ್ವನಾಥ ಗಣಾಚಾರಿ, ಜಗದೀಶರೆಡ್ಡಿ, ಶ್ರೀನಾಥ, ರಮೇಶ, ಸುರೇಶ್, ಹರೀಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಇದೇ ವೇಳೆ ನೌಕರರ ಸಂಘದ ಪದಾಧಿಕಾರಿಗಳಾದ ಪ್ರಶಾಂತ, ನರಸಿಂಹರೆಡ್ಡಿ, ಎಸ್ತರಮ್ಮ, ಅಂಬೇಡ್ಕರ್, ಬಾಲದಂಡಪ್ಪ, ಸಿದ್ದಣ್ಣ, ಮಂಜುನಾಥ, ಸೋಫಿಸಾಬ್, ಮಲ್ಲಿಕಾರ್ಜುನ ಮತ್ತಿತರರು ಮುಷ್ಕರದಲ್ಲಿ ಉಪಸ್ಥಿತರಿದ್ದರು.







