ಯಾದಗಿರಿ | ವಕ್ಫ್ ಬೋರ್ಡ್ ಅಧಿಕಾರಿಗಳ ಕಾರ್ಯ ಇತರರಿಗೆ ಮಾದರಿ: ಪಂಪನಗೌಡ

ಯಾದಗಿರಿ: ಸತತ ಶ್ರಮ ಹಾಕಿ ವಕ್ಫ್ ಆಸ್ತಿಗಳನ್ನು ಉಮ್ಮಿದ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡುವ ಮೂಲಕ ದೇಶದಲ್ಲಿಯೇ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿ ಇದೆ. ಈ ಕೆಲಸದಲ್ಲಿ ಗಿರಿಜಿಲ್ಲೆಯಲ್ಲಿ ಅತಿ ಹೆಚ್ಚು ಆಸ್ತಿಗಳನ್ನು ಅಪ್ಲೋಡ್ ಮಾಡಿದ ಅಧಿಕಾರಿಗಳ ಕಾರ್ಯ ಇತರರಿಗೆ ಮಾದರಿ ಎಂದು ಯುವ ಕಾಂಗ್ರೆಸ್ ನಾಯಕ ಪಂಪನಗೌಡ ಪಾಟೀಲ್ ತುನ್ನೂರು ಹೇಳಿದರು.
ಸೋಮವಾರ ಇಲ್ಲಿನ ವಕ್ಫ್ ಬೋರ್ಡ್ ಕಚೇರಿಗೆ ಭೇಟಿ ನೀಡಿ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿ ಝರಿನಾ ಬೇಗಂ, ಎಫ್ ಡಿಎ ಶಾಜಿಯಾ ಅಂಜು ಹಾಗೂ ಸರ್ವೆ ಅಧಿಕಾರಿ ಸಲಿಂ ಪಾಷಾ, ಎಸ್‌ಡಿಎ ಮುಹಮ್ಮದ್ ಶಾನವಾಜ್, ಡಿಇಓ ಮಹಮ್ಮದ್ ಹನೀಫ್, ಸಾಧಿಕ್ ಶೇಕ್ ಹಾಗೂ ಕಮರ್ ಶೇಕ್ ಹಾಗೂ ಅಟೆಂಡರ್ ಸೈಯದ್ ಮೀರ್ ಅವರಿಗೆ ಸನ್ಮಾನ ಮಾಡಿ ಮಾತನಾಡಿದರು.
ಈ ವೇಳೆ ಮಹಮ್ಮದ್ ಯಾಕುಬ್ ಸಿರವಾಳ, ಮುಸ್ತಾಕ್ ಅಲಿ ಯಡ್ಡಳ್ಳಿ ಹಾಗೂ ಶಫಿ ಇಂಡಿಕರ್ ಹಾಗೂ ಇತರರು ಉಪಸ್ಥಿತರಿದ್ದರು.
Next Story





