ಯಾದಗಿರಿ | ಲಾರಿ ಹರಿದು 9 ಕುರಿಗಳು ಸಾವು

ಶಹಾಪುರ : ರಸ್ತೆ ದಾಟುವಾಗ ಕುರಿಗಳು ಮೇಲೆ ಲಾರಿ ಹರಿದು 9 ಕುರಿಗಳು ಸಾವನ್ನಪ್ಪಿರುವ ಘಟನೆ ಶಹಾಪುರ ತಾಲೂಕಿನ ಮದ್ದರಕಿ ಕ್ಯಾಂಪ್ ಬಳಿ ನಡೆದಿದೆ.
ಕುರಿ ಮೆಯಿಸಿಕೊಂಡು ದೊಡ್ಡಿಯತ್ತ ತೆರಳುತ್ತಿದ್ದ ಕುರಿಗಾಯಿ ಮಾನಪ್ಪ ಅವರು, ರಸ್ತೆ ಮೇಲೆ ಕುರಿಗಳನ್ನು ದಾಟಿಸುವಾಗ ಈ ದುರ್ಘಟನೆ ಜರುಗಿದ್ದು, ಕುರಿಗಾಯಿ ಸೇರಿ 10ಕ್ಕೂ ಅಧಿಕ ಕುರಿಗಳಿಗೆ ಗಂಭೀರ ಗಾಯಗಳಾಗಿವೆ. ಮಾನಪ್ಪನಿಗೆ ಸುಮಾರು 2 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಭೀ. ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





