ಯಾದಗಿರಿ | ಜಿಎಸ್‌ಟಿ ವರ್ತಕರಿಗೆ ಒಂದು ದಿನದ ವಿಶೇಷ ಕಾರ್ಯಗಾರ ಆಯೋಜನೆ

ಯಾದಗಿರಿ : ಜಿಎಸ್ ಟಿ ಪಾವತಿಸುವ ವರ್ತಕರಿಗೆ ಸರ್ಕಾರದ ಇತ್ತೀಚಿನ ದಿನಮಾನಗಳಲ್ಲಿ ಆದಂತಹ ಕಾನೂನು ಬದಲಾವಣೆಗಳ ಬಗ್ಗೆ ತೆರಿಗೆ ಸಲಹೆಗಾರರು ಮನವರಿಕೆ ಮಾಡಿಕೊಡಬೇಕೆಂದು ಚಾರ್ಟರ್ಡ್ ಅಕೌಂಟೆಂಟ್ ಶಶಿದರ ಪಾಟೀಲ್ ಹೇಳಿದ್ದಾರೆ.
ನಗರದ ಎಸ್ ಡಿ ಎನ್ ಹೊಟೇಲ್ ನಲ್ಲಿ ಜಿಎಸ್ ಟಿ ವರ್ತಕರಿಗೆ ಜಿಲ್ಲಾ ತೆರಿಗೆ ಸಲಹೆಗಾರರ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ ʼಒಂದು ದಿನದ ವಿಶೇಷ ಕಾರ್ಯಾಗಾರʼ ಉದ್ಘಾಟಿಸಿ ಮಾತನಾಡಿದರು.
ಐಟಿಸಿ ಸೆಕ್ಷನ್ 16, 17ರ ಅಡಿಯಲ್ಲಿ ಜಿಎಸ್‌ಟಿ ಕಾಯಿದೆಯಡಿ ವಾರ್ಷಿಕ ರಿಟರ್ನ್‌ಗಳನ್ನು ಭರ್ತಿ ಮಾಡುವುದು ಮತ್ತು ಜಿಎಸ್‌ಟಿ ಅಡಿಯಲ್ಲಿ ಇತ್ತೀಚಿನ ನವೀಕರಣಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.
2018 ರಿಂದ ಜಿಎಸ್ ಟಿ ಪಾವತಿಸುತ್ತಿರುವ ತೆರಿಗೆದಾರರಿಗೆ ದಂಡದಿಂದ ವಿನಾಯಿತಿ ನೀಡಿದ್ದು, ಅವನ್ನು ವರ್ತಕರಿಗೆ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಬೇಕು ಮತ್ತು ಇದೇ ತಿಂಗಳು 2 ರಿಂದ 5 ಕೋಟಿ ರೂ. ವರೆಗೆ ತೆರಿಗೆ ಪಾವತಿಸುವ ತೆರಿಗೆದಾರರಿಗೆ ಫಾರಂ ನಂಬರ್ 9ಸಿ ಅನ್ನು ಭರ್ತಿ ಮಾಡುವ ಮೂಲಕ ಎಲ್ಲಾ ವರ್ತಕರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರುಗಳಾದ ಮುಹಮ್ಮದ್ ನಾಸೀರ್ ಮಿಯಾನ್, ಪರ್ವತಗೌಡ, ಚಾರ್ಟಡ್೯ ಅಕೌಂಟೆಂಟ್ ಗಳಾದ ವಿವೇಕ್ ತೊಟ್ಲೂರ್ ಕರ್, ಸಚಿನ್ ಇನಾನಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗಪ್ಪ ಮೊಗ್ದಂಪುರ ವಹಿಸಿದ್ದರು, ಅರುಣ್ ಕುಮಾರ್ ನಿರೂಪಿಸಿ ವಂದಿಸಿದರು.







