ಯಾದಗಿರಿ | ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆ ಕಡ್ಡಾಯ ಪಾಲನೆ ಮಾಡುವಂತೆ ಕರವೇ ಮನವಿ

ಯಾದಗಿರಿ : ಕನ್ನಡ ಭಾಷೆ ಬಳಕೆ ಮಾಡದೇ ಭಾರತೀಯ ರಿಜರ್ವ್ ಬ್ಯಾಂಕ್ ಆದೇಶ ಉಲ್ಲಂಘಿಸುತ್ತಿರುವ ಜಿಲ್ಲೆಯ ವಿವಿಧ ಬ್ಯಾಂಕುಗಳು ಕನ್ನಡ ಭಾಷೆಯಲ್ಲಿ ಸೇವೆ ನೀಡಬೇಕು ಎಂದು ಆಗ್ರಹಿಸಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಕರವೇ ಜಿಲ್ಲಾಧ್ಯಕ್ಷರಾದ ಟಿ.ಎನ್.ಭೀಮುನಾಯಕ ಅವರು ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಆರ್.ಬಿ.ಐ. ಮಾರ್ಗದರ್ಶಿ ಸೂತ್ರಗಳನ್ವಯ ಬ್ಯಾಂಕುಗಳಲ್ಲಿ ತ್ರಿಭಾಷಾ ಸೂತ್ರವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಆದರೆ ಬ್ಯಾಂಕುಗಳು ಆರ್ಬಿಐ ಸೂಚನೆಗಳನ್ನು ಪಾಲಿಸದೇ ಉದ್ಥಟತನವನ್ನು ಮೆರೆಯುತ್ತಿವೆ. ಈ ನಿಯಮದ ಪ್ರಕಾರ ಸಿಬ್ಬಂದಿ 3 ತಿಂಗಳೊಳಗೆ ಸ್ಥಳೀಯ ಕನ್ನಡ ಭಾಷೆ ಕಲಿಯಬೇಕು. ಆದರೆ ಜಿಲ್ಲೆಯಲ್ಲಿ ಪಾಲನೆ ಆಗುತ್ತಿಲ್ಲ. ಸರಕಾರ ನೀತಿ, ನಿಯಮಾವಳಿ ರೂಪಿಸಿದರೂ ಅವುಗಳನ್ನು ಪಾಲನೆ ಮಾಡದೇ ಇರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಕರವೇ ಮುಖಂಡರಾದ ಸಿದ್ದುನಾಯಕ ಹತ್ತಿಕುಣಿ, ಚೌಡಯ್ಯ ಬಾವೂರ, ಸಾಹೇಬಗೌಡನಾಯಕ, ಯಮನಯ್ಯ ಗುತ್ತೇದಾರ, ಪ್ರಕಾಶ ಪಾಟೀಲ ಜೈಗ್ರಾಮ್, ಸಿದ್ದಪ್ಪ ಕೂಯಿಲೂರ, ಸಿದ್ದಪ್ಪ ಕ್ಯಾಸಪನಳ್ಳಿ, ಅಬ್ದುಲ ಚಿಗನೂರ, ಶರಣಬಸಪ್ಪ ಯಲ್ಹೇರಿ, ವಿಶ್ವರಾಜ ಪಾಟೀಲ ಹೊನಗೇರಾ, ಸುರೇಶ ಬೆಳಗುಂದಿ, ಸೈದಪ್ಪ ಬಾಂಬೆ, ಮೌನೇಶ ಬಸ್ಸುನಾಯಕ ಸೈದಾಪೂರ, ಸುಭಾಷ ಯರಗೊಳ, ಲಿಂಗಾರಾಜ ವಡವಟ್, ಮಾಧ್ವಾರ, ಸಾಗರ ಹುಲ್ಲೇರ್, ಮಲ್ಲು ಕೊಲ್ಕರ್,ಮಹೇಶ ಸೈದಾಪೂರ, ಉಮೇಶ ಕಿಲ್ಲನಕೇರಾ, ರಮೇಶ ಡಿ.ನಾಯಕ ಹಾಗೂ ಕಾರ್ಯಕರ್ತರರು ಉಪಸ್ಥಿತರಿದ್ದರು.







