ಯಾದಗಿರಿ| ಕಳೆದುಹೋದ ಮೊಬೈಲ್ ವಾರೀಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಅಟೋ ಚಾಲಕ

ಯಾದಗಿರಿ: ಕಳೆದುಹೋದ ಮೊಬೈಲ್ ಫೋನ್ನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸುವ ಮೂಲಕ ಆಟೋ ಚಾಲಕನೋರ್ವ ಪ್ರಾಮಾಣಿಕತೆ ಮೆರೆದಿದ್ದಾರೆ.
ಅ.18ರಂದು ಬೆಳಗ್ಗೆ ಸುಮಾರು 8.30ರ ವೇಳೆ ಯಾದಗಿರಿ ನಗರದ ಕನಕ ವೃತ್ತದ ಬಳಿ ಮಂತ್ರಾಲಯ ನಿವಾಸಿ ಜಗದೀಶ ಅವರು ತಮ್ಮ ಮೊಬೈಲ್ ಫೋನ್ ಕಳೆದುಕೊಂಡಿದ್ದರು. ರಾಮಸಮುದ್ರ ನಿವಾಸಿ ಆಟೋ ಚಾಲಕ ಮಲ್ಲಪ್ಪ ಮಡಿವಾಳ ಅವರಿಗೆ ಈ ಮೊಬೈಲ್ ದೊರೆತಿದೆ. ಅವರು ಅದನ್ನು ಯಾದಗಿರಿ ನಗರ ಸಂಚಾರಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ನಂತರ ಪೊಲೀಸರು ಮೊಬೈಲ್ನ ವಾರೀಸುದಾರರನ್ನು ಸಂಪರ್ಕಿಸಿ ಕಳೆದುಹೋಗಿದ್ದ ಮೊಬೈಲ್ ಫೋನ್ನ್ನು ಸುರಕ್ಷಿತವಾಗಿ ಮರಳಿಸಿದರು. ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Next Story




