ಯಾದಗಿರಿ | ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲು ಗೃಹ ಮಂತ್ರಿಗೆ ಮನವಿ

ಯಾದಗಿರಿ : ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ, ಕೊಡೇಕಲ್ ಗ್ರಾಮದಲ್ಲಿ ಮಾದಿಗ ಸಮಾಜದ ಅಪ್ರಾಪ್ತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಮಾದಿಗ ದಂಡೋರ ಎಮ್‌ಆರ್‌ಪಿಎಸ್ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ಕಾಶಪ್ಪ ಮಾದಿಗ ಹೆಗ್ಗಣಗೇರಾ ಅವರು, ರಾಜ್ಯದ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವಿಜಯಪುರ ಗಾಂಧಿನಗರ ಬಳಿ ಇರುವ ಇಟ್ಟಂಗಿ ಭಟ್ಟಿಯಲ್ಲಿ ಮಾಲಕನಾದ ಖೇಮು ರಾಠೋಡ್ ಹಾಗೂ ಆತನ ಬೆಂಬಲಿಗರಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಕ್ಕಲಕಿ ಗ್ರಾಮದ ಮೂವರು ಕಾರ್ಮಿಕರಾದ ಸದಾಶಿವ, ಬಸಪ್ಪ ಮಾದರ, ಸದಾಶಿವ ಚಂದ್ರಪ್ಪ ಹಾಗೂ ಉಮೇಶ ಮಾಳಪ್ಪ ಮಾದರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗಿದ್ದ ಕಾರ್ಮಿಕರು ವಾಪಾಸ್ ಬರುವುದು ತಡವಾಗಿದೆ ಎಂದು ಕೋಪಗೊಂಡು ಜ.15 ರಂದು ಇಟ್ಟಿಂಗಿ ಭಟ್ಟಿ ಮಾಲಕ ಭೀಮು ಕಾರ್ಮಿಕರಿಗೆ ಫೋನ್ ಮಾಡಿ ಕರೆಸಿಕೊಂಡು ಇತನ ಮಗನಾದ ರೋಹನ್ ರಾಠೋಡ ಮತ್ತಿತರು ಕಾರ್ಮಿಕರನ್ನು ರೂಂನಲ್ಲಿ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ. ಆದರೆ ಕುಟುಂಬಕ್ಕೆ ಇಲ್ಲಿಯವರೆಗೆ ಪರಿಹಾರ ಸಿಕ್ಕಿಲ್ಲ, ಹಾಗೂ ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಸರಕಾರಿ ನೌಕರಿ ಮತ್ತು ಭೂಮಿ ಮಂಜೂರಿ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಲ್ಲು ಬೆಳಗೇರಿ, ಅನಿಲ್ ದಾಸನಕೆರಿ, ಶರಣಪ್ಪ, ವಿಲ್ಸನ್ ಹಾಲಗೇರಾ, ರವಿಕುಮಾರ್, ತಿಪ್ಪಣ್ಣ ಗೊಂದೆನೂರು, ಮರಿಯಪ್ಪ ವಡಿಗೇರ, ಶರಣಪ್ಪ, ಮರಪ್ಪ ಬೀಳ್ಹಾರ, ದುರಗಪ್ಪ, ಸಾಬಣ್ಣ, ಯೇಸು, ಇದ್ದರು.







