ಯಾದಗಿರಿ | ಸುರಪುರ ತಾಲ್ಲೂಕಿನ ತಿಂಥಣಿ ಜಾತ್ರೆಗೆ ವಿಶೇಷ ಹೆಚ್ಚುವರಿ ಬಸ್ಗಳ ವ್ಯವಸ್ಥೆ

ಯಾದಗಿರಿ : ಜಿಲ್ಲೆಯ ತಿಂಥಣಿ ಜಾತ್ರೆಗೆ ಯಾದಗಿರಿ ವಿಭಾಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ವಿಶೇಷ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಕಲ್ಪಿಸಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸುನೀಲ್ಕುಮಾರ ಹ.ಚಂದರಗಿ ಅವರು ತಿಳಿಸಿದ್ದಾರೆ.
ಸುರಪುರ ತಾಲ್ಲೂಕಿನ ತಿಂಥಣಿ ಶ್ರೀ ಮೌನೇಶ್ವರ ದೇವರ ಜಾತ್ರೆಗೆ ಬರುವ ಭಕ್ತಾದಿ ಪ್ರಯಾಣಿಕರ ಸಾರಿಗೆ ಅನುಕೂಲಕ್ಕಾಗಿ 2025ರ ಫೆ.10 ರಿಂದ 15ರವರೆಗೆ ಯಾದಗಿರಿ ವಿಭಾಗದಿಂದ ವಿಶೇಷ ಹೆಚ್ವುವರಿ ಬಸ್ಗಳ ವ್ಯವಸ್ಥೆ ಮಾಡಲಾಗಿರುತ್ತದೆ.
ಈ ವಿಶೇಷ ಬಸ್ಗಳು ಯಾದಗಿರಿ, ಶಹಾಪೂರ, ಸುರಪುರ, ಗುರುಮಠಕಲ್, ಕಲಬುರಗಿ, ತಾಳಿಕೋಟಿ, ವಿಜಯಪುರ, ಮುದ್ದೇಬಿಹಾಳ, ನಾರಾಯಣಪೂರ, ಹುಣಸಗಿ, ಕೆಂಭಾವಿ, ಸಿಂಧಗಿ, ಮುಂತಾದ ಸ್ಥಳಗಳಿಂದ ಕಾರ್ಯಚರಣೆ ಮಾಡಲಾಗುತ್ತದೆ. ಸಾರ್ವಜನಿಕ ಪ್ರಯಾಣಿಕರು ಈ ವಿಶೇಷ ಬಸ್ಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





