ಯಾದಗಿರಿ | ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ನಡೆಸಿ : ಶಾಸಕ ಪಾಟೀಲ್ ಸೂಚನೆ

ಯಾದಗಿರಿ : ಸಿಸಿ ರಸ್ತೆ ಕಾಮಗಾರಿ ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗೆ ಮುಗಿಸಬೇಕೆಂದು ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಸಂಬಂಧಪಟ್ಟವರಿಗೆ ಸೂಚಿಸಿದರು.
ನಗರದ ಆರ್.ವಿ. ಶಾಲೆಯಿಂದ ಮುಖ್ಯ ರಸ್ತೆಯವರೆಗೆ ಕೆಕೆಆರ್ ಡಿಬಿ ಅನುದಾನದಲ್ಲಿ 1 ಕೋಟಿ 36 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಮಂಗಳವಾರ ಪೂಜೆ ನೆರವೇರಿಸಿ ಮಾತನಾಡಿದರು.
ಅನೇಕ ದಿನಗಳಿಂದ ಈ ರಸ್ತೆ ಮಳೆ ನೀರಿನಿಂದ ಜಮಾಗೊಂಡು ಸಾರ್ವಜನಿಕರಿಗೆ, ಅದರಲ್ಲೂ ಶಾಲಾ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿರುವುದು ತಮ್ಮ ಗಮನಕ್ಕೆ ಬಂದಾಗ ಈ ಕೆಲಸ ತುರ್ತಾಗಿ ಇಂದು ಶಂಕುಸ್ಥಾಪನೆ ನೆರವೇರಿಸಿದ್ದಾಗಿ ಶಾಸಕರು ಹೇಳಿದರು.
ಬಹಳ ಸಂಚಾರ ಮಾಡುವ ರಸ್ತೆ ಇದಾಗಿದೆ. ಕಾಲಮಿತಿ ಮುಗಿಸಬೇಕೆಂದರು. ಗುಣಮಟ್ಟದಲ್ಕಿ ಯಾವುದೇ ತರಹದ ಹೊಂದಾಣಿಕೆಗೆ ಅವಕಾಶವಿಲ್ಲ. ಕಳೆಪೆ ಕಾಮಗಾರಿಯಾದರೇ ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಅವರು ತಾಕಿತು ಮಾಡಿದರು.
ನಗರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಸಮಸ್ಯೆಗಳು ಏನೇ ಇರಲಿ, ತಮ್ಮ ಗಮನಕ್ಕೆ ಬಂದರೆ ತಕ್ಷದ ಅವುಗಳಿಗೆ ಸ್ಪಂದಿಸಲಾಗುವುದು. ನಗರದ ಸುಂದರಿಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ್, ಯೂಡಾ ಅಧ್ಯಕ್ಷ ವಿನಾಯಕ ಮಾಲಿ ಪಾಟೀಲ್, ಪೌರಾಯುಕ್ತ ಉಮೇಶ ಚವ್ಹಾಣ, ವಾರ್ಡ್ ನ ಸದಸ್ಯ ಹಣಮಂತ ಇಟಗಿ, ರಮೇಶ ದೊಡ್ಮನಿ, ಶರಣಗೌಡ ಕಾಳೆಬೆಳಗುಂದಿ, ಶರಣಗೌಡ ಅಲ್ಲಿಪೂರ್, ಶರಣಪ್ಪ ಸಾಹುಕಾರ್, ಶ್ರೀನಾಥ್ ಜೈನ್, ಕೃಷ್ಣಾ ಪಾಂಚಾಳ, ದುರ್ಗಣ್ಣ ಹಪ್ಪಳ, ತಿಮಣ್ಣ ನಾಯಕ,ಶರಣಗೌಡ ಬಾಲ್ಕಲ್,ಬನ್ನಪ್ಪ ಮಾಸ್ಟರ್, ವಿಶ್ವನಾಥ ಮಾಲಿಪಾಟೀಲ್ , ಸತೀಶ್ ಶಹಾಪೂರಕರ್, ಪ್ರಜ್ವಾಲ್, ಸೇರಿದಂತೆ ಮತ್ತಿತರರು ಇದ್ದರು.







