ಯಾದಗಿರಿ | ಅರಕೇರಾ, ಆಶನಾಳ ಗ್ರಾಮದ ಕಾಂಗ್ರೆಸ್ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ಯಾದಗಿರಿ: ಅರಕೇರಾ ಗ್ರಾಮದ ಹಲವು ಕಾಂಗ್ರೆಸ್ ಮುಖಂಡರು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರರವರ ಕಚೇರಿಯಲ್ಲಿ ಬುಧವಾರ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ವೇಳೆ ಮಾತನಾಡಿದ ಶಾಸಕ ಶರಣಗೌಡ ಕಂದಕೂರ, ಪಕ್ಷದ ಕಾರ್ಯಕರ್ತರು ಪಕ್ಷದ ಶಿಸ್ತು, ನಿಯಮಗಳನುಸಾರ ಕಾರ್ಯನಿರ್ವಹಿಸಬೇಕು. ನಮ್ಮಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಕೂಡ ಮುಖಂಡರಾಗಿದ್ದು, ಪ್ರತಿಯೊಬ್ಬರಿಗೂ ನಮ್ಮ ಪಕ್ಷದಲ್ಲಿ ಪಕ್ಷ ನಿಷ್ಠೆಯಂತೆ ಅಧಿಕಾರ ಹಂತಹಂತವಾಗಿ ಸಿಗಲಿದೆ ಎಂದು ಹೇಳಿದರು.
ಶರಣಯ್ಯಸ್ವಾಮಿ ಅರಕೇರಾ, ಅಶೋಕರಡ್ಡಿ ಮಾ.ಪಾ. ಪಂಪಣ್ಣಗೌಡ, ಸಿದ್ದಪ್ಪ ಬಡಿಗೇರ್, ಮಲ್ಲಿಕಾರ್ಜುನ ಮಾ.ಪಾ, ಮೌನೇಶ ಹಳಿಮನಿ, ವೀರೇಶ ಪರದಾನಿ, ಮಲ್ಲಪ್ಪ ಪರದಾನಿ, ನಿಂಗಪ್ಪ ಹಿರಿಕುರುಬರು, ಶಿವಾನಂದ ಕಿಣಿಕೇರಿ, ಹೊನ್ನಪ್ಪ ಹಿರಿಕುರುಬರು ಸೇರಿದಂತೆ ಹಲವು ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ದೊಡ್ಡಪ್ಪಗೌಡ ಹಾದಿಮನಿ, ಬಾಪುಗೌಡ ರಾಮಸಮುದ್ರ, ಶಿವಾರಡ್ಡಿ ಆಶನಾಳ, ಶರಣಗೌಡ ಆಶನಾಳ, ವೀರೇಶ ಆಶನಾಳ, ಬಸಲಿಂಗರಡ್ಡಿ ನಾನಕನಳ್ಳಿ, ಸಿದ್ದರಾಮರೆಡ್ಡಿ, ನವೀನ್‌ಕುಮಾರ್, ಹಣಮಂತ ಮೂಲಿಮನಿ, ಚಂದ್ರಶೇಖರ್, ಹೊನ್ನಪ್ಪ ಹಿರಿಕುರುಬರು, ಆಶಪ್ಪ ಮಾಸ್ತರ, ಹಣಮಂತ ಉಪ್ಪರಕಿ, ಸಾಬಣ್ಣ ದಾಸರ್ ಸಹಿತ ಹಲವರು ಉಪಸ್ಥಿತರಿದ್ದರು.





