ಯಾದಗಿರಿ | ವಾಹನ ಚಾಲನಾ ನಿಯಮ ಪಾಲಿಸಿ ಜೀವ ಉಳಿಸಿಕೊಳ್ಳಿ : ಆರ್.ಟಿ.ಓ ಮಿಲಿಂದ್ ಕುಮಾರ್

ಯಾದಗಿರಿ : ಸರಕಾರದ ವಾಹನ ಚಾಲನಾ ನಿಯಮಗಳನ್ನು ಪಾಲಿಸುವುದರೊಂದಿಗೆ ಸಾರ್ವಜನಿಕರು ವಾಹನಗಳನ್ನು ಚಲಾಯಿಸಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮಿಲಿಂದಕುಮಾರ ಹೇಳಿದರು.
ನಗರದ ಹಳೆ ಬಸ್ ನಿಲ್ದಾಣದ ಸಮೀಪ ಸೋಮವಾರ ಬೆಳಗ್ಗೆ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಂಗವಾಗಿ ಆಯೋಜಿಸಿದ್ದ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸಪ್ತಾಹದ ಮುಖ್ಯ ಉದ್ದೇಶವೆಂದರೇ ಸರ್ವರೂ ಅಪಘಾತ ರಹಿತ ವಾಹನ ಚಲಾಯಿಸಬೇಕು. ಜೀವಕ್ಕಿಂತ ಅಮೂಲ್ಯವಾದದ್ದು ಮತ್ತೊಂದಿಲ್ಲ ಎಂದರು.
ಅಪಘಾತ ತಡೆಯಬೇಕು, ಹೆಲ್ಮೇಟ್ ಕಡ್ಡಾಯವಾಗಿ ಧರಿಸಬೇಕು, ಸೀಟ್ ಬೆಲ್ಟ್ ಧರಿಸಬೇಕು, ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು, ಮೂರು ಜನರು ಕುಳಿತು ಹೋಗಬಾರದು ಹೀಗೆ ಅನೇಕ ನಿಯಮಗಳಿದ್ದು, ಅವುಗಳೆಲ್ಲವನ್ನು ಚಾಚು ತಪ್ಪದೇ ಎಲ್ಲರೂ ಪಾಲಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಇಲಾಖೆ ಅಧಿಕಾರಿಗಳಾದ ಡಿಟಿಒ ಮಾಳಿಂಗರಾಯ, ಇನ್ ಸ್ಪೆಕ್ಟರ್ ಗಳಾದ ಹಯ್ಯಾಳಪ್ಪ, ಪ್ರಭಾಕರ, ಚಂದ್ರಕಾಂತ, ಶಿವಕುಮಾರ ನವಲೆ, ಯಲ್ಲಪ್ಪ ದೊಡ್ಡನಿ, ಜುಬೇರ್ ಅಹ್ಮದ್, ವಾಹನ ಮೊಟಾರು ತರಬೇತಿ ಶಾಲೆಗಳ ಮುಖ್ಯಸ್ಥರು, ಆಟೋರಿಕ್ಷಾ ಚಾಲಕರು, ಶಾಲಾ ಮಕ್ಕಳು ಭಾಗವಹಿಸಿದ್ದರು.







