ಯಾದಗಿರಿ | ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ : ಸಜ್ಜನ್

ಸುರಪುರ : ಈ ಬಾರಿ ಬಸವೇಶ್ವರ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸಾಮಾಜಿಕ ನ್ಯಾಯದ ಅಡಿಯಲ್ಲಿ ಆಯ್ಕೆಗೊಳಿಸಲಾಗಿದೆ ಎಂದು ಸಂಘದ ನಿಕಟಪೂರ್ವ ಅಧ್ಯಕ್ಷ ಡಾ.ಸುರೇಶ ಆರ್.ಸಜ್ಜನ್ ತಿಳಿಸಿದರು.
ಇಲ್ಲಿಯ ಬಸವೇಶ್ವರ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಅಂಗವಾಗಿ ನಡೆದ ಚುನಾವಣೆ ನಂತರ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿ, ಕಳೆದ 30 ವರ್ಷಗಳಿಂದ ಬ್ಯಾಂಕ್ ಉತ್ತಮವಾಗಿ ಸೇವೆ ನೀಡುತ್ತಾ ಬಂದಿದೆ. ಮೊದಲಿಗೆ ಅಧ್ಯಕ್ಷರಾಗಿದ್ದ ಬಸವರಾಜ ಜಮದ್ರಖಾನಿಯವರು ಇದಕ್ಕೆ ಉತ್ತಮ ಅಡಿಪಾಯವನ್ನು ಹಾಕಿಕೊಟ್ಟಿದ್ದಾರೆ, ನಂತರ ಅವರ ಹಾಗೂ ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಕಳೆದ 15 ವರ್ಷಗಳಿಂದ ಬ್ಯಾಂಕ್‌ನ ಅಭಿವೃಧ್ಧಿಗಾಗಿ ನಾನು ಕೆಲಸ ಮಾಡಿದ್ದೇನೆ, ಈಗ ಅಧ್ಯಕ್ಷರಾಗಿ ಎಚ್.ಸಿ.ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ವಿರೇಶ ನಿಷ್ಠಿ ದೇಶಮುಖ ಅವಿರೋಧವಾಗಿ ಆಯ್ಕೆಯಾಗಿದ್ದು, ಇವರೊಟ್ಟಿಗೆ ಎಲ್ಲ ನಿರ್ದೇಶಕರು ಜೊತೆಗೂಡಿ ಬ್ಯಾಂಕ್ ಉತ್ತಮವಾಗಿ ಸೇವೆ ನೀಡಲಿದೆ, ಚುನಾವಣಾ ಪೂರ್ವದಲ್ಲಿ ನೀಡಿರುವ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ನೂತನ ಅಧ್ಯಕ್ಷ ಎಚ್.ಸಿ ಪಾಟೀಲ್ ಮಾತನಾಡಿ, ಎಲ್ಲ ನಿರ್ದೇಶಕರು ನನಗೆ ಅವಿರೋಧವಾಗಿ ಆಯ್ಕೆಗೊಳಿಸಿದ್ದಕ್ಕೆ ತುಂಬಾ ಧನ್ಯವಾದವನ್ನು ಸಲ್ಲಿಸುತ್ತೇನೆ ಮತ್ತು ತಮ್ಮೆಲ್ಲರ ಸಹಕಾರದೊಂದಿಗೆ ಉತ್ತಮವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಉಪಾಧ್ಯಕ್ಷ ವಿರೇಶ ನಿಷ್ಠಿ ದೇಶಮುಖ ಮಾತನಾಡಿದರು.
ಆರಂಭದಲ್ಲಿ ಚುನಾವಣಾಧಿಕಾರಿ ಮಲ್ಲಿಕಾರ್ಜುನ ಚಲುವಾದಿ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಅಧ್ಯಕ್ಷ ಸ್ಥಾನಕ್ಕೆ ಎಚ್.ಸಿ ಪಾಟೀಲ್, ಉಪಾಧ್ಯಕ್ಷ ಸ್ಥಾನಕ್ಕೆ ವಿರೇಶ ನಿಷ್ಠಿ ದೇಶಮುಖ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಿಸಿದರು.
ನಂತರ ಸಹಕಾರ ಸಂಘ ದಿಂದ ನೂತನ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಡಾ.ಸುರೇಶ ಸಜ್ಜನ್,ಮಂಜುನಾಥ ಜಾಲಹಳ್ಳಿ,ಮಹಿಳಾ ನಿರ್ದೇಶಕರಾದ ನೀಲಮ್ಮ ರಾಜಶೇಖರ ಕುಂಬಾರ,ಜಯಲಲಿತಾ ವಿ.ಪಾಟೀಲ್, ರವೀಂದ್ರ ಅಂಗಡಿ,ವಿಜಯಕುಮಾರ ಬಂಡೋಳಿ,ಕೃಷ್ಣಾರಡ್ಡಿ ಮುದನೂರ,ಮಲ್ಲಿಕಾರ್ಜುನರಡ್ಡಿ ಅಮ್ಮಾಪುರ, ಮಲ್ಲಿಕಾರ್ಜುನ ಜಾಲಹಳ್ಳಿ ಕಕ್ಕೇರಾ, ವೀರಭದ್ರಪ್ಪ ಕೆಂಭಾವಿ ಸತ್ಯಂಪೇಟೆ ಉಪಸ್ಥಿತರಿದ್ದರು.







