ಯಾದಗಿರಿ | ಬುದ್ದನ ಜ್ಞಾನದಿಂದ ಮನಸ್ಸು ವೃದ್ಧಿ; ಮರೆಪ್ಪ ಚಟ್ಟೇರಕರ್

ಯಾದಗಿರಿ: ಬುದ್ಧ ವಂದನಾ ಮತ್ತು ಧಮ್ಮ ಧ್ಯಾನ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ನಾವು ಪ್ರತಿ ಭಾನುವಾರ ಮಾಡುತ್ತಾ ಬರುತ್ತಿದ್ದು, ಈ ಭಾನುವಾರ ಲುಂಬಿನಿ ಗೆಳೆಯರ ಬಳಗದಿಂದ ವಿನೂತನವಾಗಿ ಅರಳಿ ಮರದ ಸಸಿ ನೆಡುವ ಮೂಲಕ ಒಂದು ಪರಿಸರ ಸ್ನೇಹಿ ಜೊತೆಗೆ ಇಂತಹ ಒಳ್ಳೆಯ ಪರಿಸರದ ಮಧ್ಯೆ ಬುದ್ಧನ ಜ್ಞಾನ ಮಾಡುವುದರಿಂದ ಮನಸ್ಸು ವೃದ್ಧಿಯಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್ ಅಭಿಪ್ರಾಯ ಪಟ್ಟರು.
ನಗರದ ಲುಂಬಿನಿ ಉದ್ಯಾನವನದಲ್ಲಿ ನಡೆದ ಬುದ್ಧ ವಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಲುಂಬಿನಿ ಉದ್ಯಾನವನ ಎಂದು ಹೆಸರಿಡಲು ಸಾಕಷ್ಟು ಹೋರಾಟಗಳು ಮಾಡಲಾಗಿದೆ. ನಮ್ಮ ಸಮಾಜದ ಮುಖಂಡ ಇದಕ್ಕೆ ಶ್ರಮಿಸಿದ್ದಾರೆ. ಈಗ ಇದನ್ನು ಕಾಪಾಡಿಕೊಂಡು ಹೋಗಲು ಲುಂಬಿನಿ ಗೆಳೆಯರ ಬಳಗ ಮಾಡಿದ್ದು, ಸಂತೋಷವಾಗಿದೆ. ಒಳ್ಳೆಯ ಕಾರ್ಯಕ್ರಮ ಇದೆ ರೀತಿ ಬುದ್ಧನ ಚಿಂತನೆಗಳು ಜನರಿಗೆ ಮುಟ್ಟಿಸುವ ಕೆಲಸ ಮಾಡಿದ್ದಲ್ಲಿ ನಾವು ನಿಮ್ಮ ಜೊತೆಗೆ ಸದಾ ಇದ್ದು, ಎಲ್ಲಾ ರೀತಿಯ ಸಹಕಾರ ನೀಡುತ್ತೆವೇ ಎಂದು ಬುದ್ಧ ವಂದನಾ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡಿ ಅವರು ಧೈರ್ಯ ತುಂಬಿದರು.
ನಂತರ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರ ಕಟ್ಟಿಮನಿ ಅವರು, ಲುಂಬಿನಿ ಉದ್ಯಾನವನದಲ್ಲಿ ನಡುಗಡ್ಡೆಯಲ್ಲಿ ಬುದ್ಧನ ಮೂರ್ತಿ ಸ್ಥಾಪಿಸಲು ಜಿಲ್ಲಾಧಿಕಾರಿ ಮೂಲಕ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಆದಷ್ಟು ಬೇಗ ಬುದ್ಧನ ಮೂರ್ತಿ ಸ್ಥಾಪನೆಗೆ ಪ್ರಯತ್ನ ನಡೆಯುತ್ತಿದೆ. ಲುಂಬಿನಿ ಉದ್ಯಾನವನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಲು ಲುಂಬಿನಿ ಗೆಳೆಯರ ಬಳಗ ಕೂಡ ಸಹಕಾರಿಯಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮರೆಪ್ಪ ಬುಕ್ಕಲ್, ನಿಂಗಪ್ಪ ಕೊಲ್ಲೂರಕರ್, ಸುರೇಶ್ ಬೊಮ್ಮನ್ ಬಸವರಾಜ ಹೊಸಮನಿ, ಶರಣು ಎಸ್ ನಾಟೇಕಾರ್, ಚಂದ್ರುಕುಮಾರ ಛಲವಾದಿ, ಅಜಯ ಯಳಸಂಗಿಕರ್, ಜ್ಯೋತಿ ಅಜಯ ಯಳಸಂಗಿಕರ್, ಶರಬು ಬಿ ನಾಟೇಕಾರ್, ಗಿರೀಶ್ ಚಟ್ಟೇರಕರ್, ಗುರುಲಿಂಗಪ್ಪ ಕಟ್ಟಿಮನಿ, ಮಾತೇಶ ದೊಡ್ಡಮನಿ, ಕೈಲಾಸ ಅನವಾರ, ದೇವೇಂದ್ರಪ್ಪ ಈಟೇ, ಸೈದಪ್ಪ ಕೂಯಿಲೂರ್, ಮಲ್ಲಿಕಾರ್ಜುನ ಬೊಮ್ಮನ್, ಮಲ್ಲಿಕಾರ್ಜುನ ಈಟೇ, ಸುರೇಂದ್ರ ಕುರಕುಂಬಳಕರ್, ಮರಿಲಿಂಗಪ್ಪ ಕೊಲ್ಲೂರಕರ್, ಸಂಪತ್ ಚಿನ್ನಾಕರ್, ವಸಂತ ಸುಂಗಲಕರ್, ಆನಂದ್ ಚಟ್ಟೇರಕರ್, ವಿಜಯ ಕುಮಾರ್ ಆಶನಾಳ, ಸಿದ್ರಾಮಪ್ಪ ಚಟ್ಟೇರಕರ್, ಮನೊಜಕುಮಾರ ಚಟ್ಟೇರಕರ್, ರಾಜೇಂದ್ರಕುಮಾರ, ಕಟ್ಟಿಮನಿ, ಅವಿನಾಶ್ ಅನವಾರ, ಬಸವರಾಜ ರವಿಕುಮಾರ್, ಸೇರಿದಂತೆ ಅನೇಕ ಯುವಕರು ಭಾಗವಹಿಸಿದರು.







