ಯಾದಗಿರಿ | ನಗರಸಭೆ ಸಾಮಾನ್ಯ ಸಭೆಯಲ್ಲಿನ ನಿರ್ಣಯಕ್ಕೆ ಮಾಜಿ ಸಚಿವರು ಗೌರವ ನೀಡಲಿ : ಶಾಸಕ ವೇಣುಗೋಪಾಲ ನಾಯಕ

ಸುರಪುರ : ನಗರಸಭೆಯ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರ ಅಭಿಪ್ರಾಯದೊಂದಿಗೆ ತೆಗೆದುಕೊಂಡ ನಿರ್ಣಯಕ್ಕೆ ಮಾಜಿ ಸಚಿವರು ಕಿಂಚಿತ್ತೂ ಗೌರವ ನೀಡುವುದಿಲ್ಲ, ಗೌರವ ನೀಡಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಮಾಜಿ ಸಚಿವ ರಾಜುಗೌಡ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯ ಮನೆಗಳಿಗೆ ಅಳವಡಿಸಿರುವ ನಳಗಳ ನೀರು ಸರಬರಾಜು ಬಿಲ್ ನಾನು ಒಬ್ಬನೆ ಕುಳಿತು ನಿರ್ಧರಿಸಿದ್ದಲ್ಲ, ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಸೇರಿ ನಿರ್ಣಯ ಕೈಗೊಂಡಿದ್ದು, ಮಾಜಿ ಸಚಿವರು ಅದನ್ನು ವಿರೋಧಿಸುವ ಮೂಲಕ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದರು.
ಸಭೆಯಲ್ಲಿ ದರ ನಿಗದಿ ಪಡಿಸುವ ವಿಷಯ ಪ್ರಸ್ತಾಪವಾದಾಗ ಎಲ್ಲಾ ಸದಸ್ಯರು 20 ತಿಂಗಳ ಬಿಲ್ ಭರಿಸುವುದು ಹೊರೆಯಾಗಲಿದೆ ಎಂದಾಗ, 5 ತಿಂಗಳು ಪ್ರಾಯೋಗಿಕ ಎಂದು 15 ತಿಂಗಳ ಬಿಲ್ ಭರಿಸಲು ಅದುಕೂಡ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ನಿಯಮದಂತೆ ತಿಂಗಳಿಗೆ ಕನಿಷ್ಠ ದರ ನಿಗದಿಪಡಿಸಲು ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಠ್ಠಲ್ ಯಾದವ್, ನಗರಸಭೆ ಅಧ್ಯಕ್ಷೆ ಹೀನಾಕೌಸರ್ ಶಕೀಲ್ ಅಹ್ಮದ್ ಖುರೇಶಿ, ನಯೋಪ್ರಾ ಅಧ್ಯಕ್ಷ ಪ್ರಕಾಶ ಗುತ್ತೇದಾರ್, ಅಬ್ದುಲ್ ಗಫೂರ್ ನಗನೂರಿ, ನಾಸಿರ್ ಕುಂಡಾಲೆ, ಧರ್ಮಣ್ಣ ಮಡಿವಾಳ, ಶಿವುಕುಮಾರ ಕಟ್ಟಿಮನಿ, ಮಹ್ಮದ್ ಗೌಸ್ ಕಿಣ್ಣಿ,ಗಾಳೆಪ್ಪ ಹಾದಿಮನಿ, ಎಮ್.ಡಿ.ಇಸ್ಮಾಯಿಲ್, ಅಹ್ಮದ್ ಶರೀಫ್ ಇತರರಿದ್ದರು.







