ಯಾದಗಿರಿ | ಅರಣ್ಯ ಭೂಮಿ ಒತ್ತುವರಿ ತಡೆಯಲು ಶೋಷಿತರ ಒಕ್ಕೂಟ ಮನವಿ

ಸುರಪುರ : ನಗರ ಸೇರಿದಂತೆ ತಾಲೂಕಿನಾದ್ಯಂತ ಅನೇಕ ಕಡೆಗಳಲ್ಲಿ ಅರಣ್ಯ ಇಲಾಖೆ ಭೂಮಿ ಒತ್ತುವರಿಯಾಗಿದನ್ನು ತಡೆಯುವಂತೆ ಆಗ್ರಹಿಸಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟ ದಿಂದ ಪ್ರತಿಭಟನೆ ನಡೆಸಲಾಗಿದೆ.
ನಗರದ ಅರಣ್ಯ ಇಲಾಖೆ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಬೊಮ್ಮಹಳ್ಳಿ ಭಾಗವಹಿಸಿ ಮಾತನಾಡಿ, ತಾಲೂಕಿನಲ್ಲಿ ಮರಗಳ ಕಡಿದು ವ್ಯಾಪಾರ ಮಾಡುತ್ತಿರುವುದರ ಕುರಿತು ಯಾವುದೇ ನಿಯಮ ಪಾಲನೆ ಮಾಡುತ್ತಿಲ್ಲ, ಕಳೆದ 3 ವರ್ಷಗಳಿಂದ ನಿಯಮಾನುಸಾರ ಜಾರಿಗೆ ತಂದಿರುವ ಯೋಜನೆಗಳ ವಿವರ ನೀಡಬೇಕು, ಸುರಪುರ ನಗರದಲ್ಲಿ ಇರುವ ಕಟ್ಟಿಗೆ ಅಡ್ಡಗಳ ನಿಯಮಾನುಸಾರ ತೆರೆದಿರುವ ಬಗ್ಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹಣಮಂತಗೌಡ ಬಿಚ್ಚಗತ್ತಿ, ಒಕ್ಕೂಟದ ತಾಲೂಕ ಅದ್ಯಕ್ಷ ನಾಗರಾಜ ದರಬಾರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Next Story





