ಯಾದಗಿರಿ: ವಿದ್ಯುತ್ ಆಘಾತಕ್ಕೆ ರೈತ ಬಲಿ

ಯಾದಗಿರಿ: ಜಮೀನಿನಲ್ಲಿ ವಿದ್ಯುತ್ ತಂತಿ ತಗುಲಿ ರೈತನೋರ್ವ ಮೃತಪಟ್ಟ ಘಟನೆ ಜಿಲ್ಲೆಯ ಸುರಪುರ ನಗರದ ರಂಗಂಪೇಟೆಯ ತಿಮ್ಮಾಪುರದಲ್ಲಿ ಸಂಭವಿಸಿದೆ.
ಸೋಮನಾಥ ನಿಂಗಪ್ಪ (40) ಸಾವನ್ನಪ್ಪಿರುವ ರೈತ. ಇವರು ಮಹಿಬೂಬ್ ಸುಭಾನಿ ದರ್ಗಾದ ಹಿಂಬದಿಯಲ್ಲಿನ ಜಮೀನಿನಲ್ಲಿ ವಿದ್ಯುತ್ ತಂತಿ ತಗುಲಿ ಆಘಾತದಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





