ಯಾದಗಿರಿ | ಮಾಜಿ ಶಾಸಕ ತೆಲ್ಕೂರ್ ಅವರ ಆರೋಪದಲ್ಲಿ ಹುರುಳಿಲ್ಲ : ಶಾಸಕ ಚೆನ್ನಾರಡ್ಡಿ ಪಾಟೀಲ್ ಸ್ಪಷ್ಟನೆ

ಯಾದಗಿರಿ: ನಗರದ ಡಿವೈಎಸ್ ಪಿ ಅಧಿಕಾರ ಸ್ವೀಕಾರ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಕಾಂಗ್ರೆಸ್ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಸ್ಪಷ್ಟಪಡಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಶನಿವಾರ ವಡಗೇರಾ ತಾಲೂಕಿನ 12 ಗ್ರಾಮಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ನಂತರ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಖಾಲಿ ಇರುವ ಹುದ್ದೆಗೆ ರಾಜ್ಯ ಸರ್ಕಾರ, ಗೃಹ ಇಲಾಖೆಯು ಅಧಿಕಾರಿಗಳನ್ನು ವರ್ಗವಣೆ ಮಾಡುವುದು ಸಹಜವಾಗಿದೆ. ಇಲ್ಲಿಗೆ ಪೊಸ್ಟಿಂಗ್ ಪಡೆದವರು ಯಾಕೆ ಇನ್ನೂ ಅಧಿಕಾರ ಸ್ಚೀಕರಿಸಿಲ್ಲ ಎಂಬ ಬಗ್ಗೆ ಇಲಾಖೆ ಮೇಲಾಧಿಕಾರಿಗಳು ಇಲ್ಲವೇ ಡಿವೈಎಸ್ ಪಿಯಾಗಿ ಬರಲಿರುವವರು ಹೇಳಬೇಕೆಂದರು.
ಆದರೇ ಇದರಲ್ಲಿ ತಮ್ಮದು ಯಾವುದೇ ಪಾತ್ರವಿಲ್ಲ ಎಂದ ಶಾಸಕರು, ಈ ಹಿಂದೇ ತೆಲ್ಕೂರ್ ಅವರು ಶಾಸಕರಾಗಿ ಕೆಲಸ ಮಾಡಿದ್ದಾರೆ. ಶಾಸಕಾಂಗ, ಕಾರ್ಯಾಂಗ ವ್ಯವಸ್ಥೆ ಅವರಿಗೂ ಗೊತ್ತಿದೆ ಎಂದು ಭಾವಿಸುತ್ತೆನೆ ಎಂದು ಶಾಸಕರು ಹೇಳಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ನೀಲಕಂಠ ಬಡಿಗೇರ್ ಇದ್ದರು.
12 ಗ್ರಾಮಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣೆ:
ಇಂದು(ಜು.12) ವಡಗೇರಾ ತಾಲೂಕಿನ ಸುಮಾರು 12 ಗ್ರಾಮ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು. ಈ ಮೂಲಕ ಸಾರ್ವಜನಿಕರ ಕೆಲಸಗಳಿಗೆ ವೇಗ ಸಿಗಲಿದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ಹೇಳಿದರು.
ತಮ್ಮ ಮತಕ್ಷೇತ್ರದಲ್ಲಿ ಈ ಮುಂಚೆ 17 ಲ್ಯಾಪ್ ಟಾಪ್ ವಿತರಿಸಲಾಗಿದೆ. ಇ - ಖಾತೆ ಕೆಲಸ ಸೇರಿದಂತೆಯೇ ವಿವಿಧ ಸಾರ್ವಜನಿಕರ ಕೆಲಸಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದರು.







