Yadagiri | ಗಣೇಶೋತ್ಸವ ; ಮುಸ್ಲಿಂ ಯುವಕರಿಂದ ಅನ್ನಸಂತರ್ಪಣೆ

ಯಾದಗಿರಿ: ನಗರದ ಚಿರಂಜೀವಿ ನಗರದಲ್ಲಿ ಇಮ್ಮಡಿಪುಲಿಕೇಶಿ ಮಿತ್ರ ಮಂಡಳಿ ವತಿಯಿಂದ ಆಯೋಜಿಸಿದ್ದ ಗಣೇಶೋತ್ಸವದಲ್ಲಿ, ಗಣೇಶ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಮುಸ್ಲಿಂ ಯುವಕರಿಂದ ಅನ್ನಸಂತರ್ಪಣೆ ನಡೆಯಿತು.
ಸರ್ಕಾರ್ ಗ್ರೂಪ್ ವತಿಯಿಂದ ಗ್ರೂಪ್‌ನ ಸದಸ್ಯರು ಗಣೇಶ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ನಡೆಸಿದರು.
ಸಾಮಾಜಿಕ ಸೇವೆಗೆ ಧರ್ಮದ ಗಡಿ ಇಲ್ಲ ಎಂಬ ಸಂದೇಶದೊಂದಿಗೆ ಹಬ್ಬದ ಸಂದರ್ಭದಲ್ಲಿ ಪರಸ್ಪರ ಸಹಕಾರ, ಸಹೋದರತ್ವ ಮತ್ತು ಮಾನವೀಯತೆಯನ್ನು ಬೆಳೆಸುವ ಉದ್ದೇಶದಿಂದ ಈ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಗ್ರೂಪ್ ಸದಸ್ಯರು ತಿಳಿಸಿದರು.
ಗಣೇಶೋತ್ಸವದಲ್ಲಿ ಮುಸ್ಲಿಂ ಯುವಕರು ಅನ್ನಸಂತರ್ಪಣೆ ನಡೆಸಿದ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Next Story




