ಯಾದಗಿರಿ | ಜನಸಾಮಾನ್ಯರಿಗೆ ಉತ್ತಮ ಸೇವೆ ನೀಡಿ : ಮಹೇಶ ರೆಡ್ಡಿ ಮುದ್ನಾಳ್ ಸಲಹೆ

ಯಾದಗಿರಿ : ದೇಶದ ಸಮಗ್ರ ಅಭಿವೃದ್ಧಿ ಕಾರ್ಯಕ್ಕೆ ಸದಾ ಕ್ರಿಯಾಶೀಲತೆಯಿಂದ ಹಾಗೂ ಜನಪರ ಏಳ್ಗೆಗೆ ಮುಂಚೂಣಿಯಲ್ಲಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಾಗಿದ್ದಾರೆ. ಅಂತಹ ಮಹಾನ್ ವ್ಯಕ್ತಿ ಹಾಗೂ ಬಿಜೆಪಿ ಪಕ್ಷದಲ್ಲಿ ಕಾರ್ಯನಿರ್ವಹಿಸುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ ಎಂದು ಬಿಜೆಪಿ ಯುವ ಮುಖಂಡ ಮಹೇಶ್ ರೆಡ್ಡಿ ಗೌಡ ಮುದ್ನಾಳ್ ಸಲಹೆ ನೀಡಿದರು.
ನಗರದ ಬಿ.ಜೆ.ಪಿ. ಕಾರ್ಯಾಲಯದಲ್ಲಿ ಇತ್ತೀಚಿಗೆ ಹಳಿಗೇರ ಗ್ರಾಮಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷ ಆಯ್ಕೆಯಲ್ಲಿ ನಿಂಗಮ್ಮ ಅವರನ್ನು ಅವಿರೋಧ ಆಯ್ಕೆ ಹಿನ್ನಲೆ ನೂತನ ಅಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿದ ಅವರು, ಜನಗಳ ಸೇವೆ ಮಾಡುವುದು ಪುಣ್ಯದ ಕೆಲಸ ಅದು ಬಿಜೆಪಿಯಂತ ದೇಶದ ಬಹುದೊಡ್ಡ ಪಕ್ಷದಲ್ಲಿ ಇದ್ದು, ಜನರ ಸೇವೆ ಮಾಡುವುದು ಮಹತ್ವದ ಕಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡ ಭೀಮರಾಯ ಕೊಂಡಿ ಆರ್.ಹೊಸಳ್ಳಿ, ಮಾರಪ್ಪ ವರ್ಕನಳ್ಳಿ, ಹಣಮಂತ ಹಾಕಿನೂರು,ಗ್ರಾಪo ಸದಸ್ಯ ಸಿದ್ರಾಮಪ್ಪ,ನಗರಸಭೆ ಸದಸ್ಯ ಸ್ವಾಮಿದೇವ್ ದಾಸನಕೇರಿ, ಮಾಜಿ ನಗರಾಭಿವೃದ್ಧಿ ಸದಸ್ಯ ಸುಭಾಸ್ ಮಾಳಿಕೇರಿ, ರಾಜು ಪೂಜಾರಿ,ದುರ್ಗಪ್ಪ ಹೆಚ್. ಪೂಜಾರಿ ಇತರರು ಇದ್ದರು.







