ಯಾದಗಿರಿ | ಭಾರೀ ಮಳೆ : ಮನೆ ಕುಸಿತ

ಸುರಪುರ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ರಂಗಪೇಟೆಯ ತಿಮ್ಮಾಪುರದಲ್ಲಿ ಮನೆ ಕುಸಿದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿರುವ ಘಟನೆ ನಡೆದಿದೆ.
ದೇವಕಿಮ್ಮ ಬಸವರಾಜ ಕುಂಬಾರ ಎಂಬವರ ಮನೆ ಮಳೆಯಿಂದ ಸಂಪೂರ್ಣ ಬಿದ್ದು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ದೇವಾಕ್ಯಮ್ಮ ತಿಳಿಸಿದ್ದಾರೆ.
ಸ್ಥಳಕ್ಕೆ ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ನಗರಸಭೆಯ ಕಿರಿಯ ಅಭಿಯಂತರರು ಭೇಟಿ ನೀಡಿ ವೀಕ್ಷಿಸಿದ್ದಾರೆ. ಮನೆಯ ಗೋಡೆಗಳು, ಮೇಲ್ಚಾವಣಿ ಎಲ್ಲವೂ ಕೂಡ ಸಂಪೂರ್ಣವಾಗಿ ಬಿದ್ದಿದ್ದರಿಂದ ಪುನಃ ಮನೆಯನ್ನು ನಿರ್ಮಿಸಲು ನಾಲ್ಕರಿಂದ ಐದು ಲಕ್ಷ ರೂ. ಗಳ ಖರ್ಚಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸರಕಾರ ನಮಗೆ ಪರಿಹಾರ ನೀಡಬೇಕು ಅಥವಾ ಮನೆಯನ್ನಾದರೂ ನಿರ್ಮಿಸಿಕೊಡಬೇಕು ಎಂದು ಸಂತ್ರಸ್ತೆ ಮಹಿಳೆ ದೇವಕ್ಕೆಮ್ಮ ಮನವಿ ಮಾಡಿಕೊಂಡಿದ್ದಾರೆ.
Next Story





