ಯಾದಗಿರಿ | ಜನರ ಕಷ್ಟ-ಸುಖದಲ್ಲಿ ಭಾಗಿಯಾಗುತ್ತೇನೆ : ಶಾಸಕ ರಾಜಾ ವೇಣುಗೋಪಾಲ್

ಸುರಪುರ : ದೇವರಗೋನಾಲ ಗ್ರಾಮ ನಮ್ಮ ಕುಟುಂಬಕ್ಕೆ ಸಾಕಷ್ಟು ಶ್ರಮಿಸಿದೆ, ಈ ಗ್ರಾಮವೆಂದರೆ ನಮ್ಮ ಕುಟುಂಬಕ್ಕೆ ತುಂಬಾ ಗೌರವ, ಯಾವ ಸಮಯದಲ್ಲೂ ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗುವುದಾಗಿ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿದರು.
2022-23ನೇ ಸಾಲಿನ ಕೆಕೆಆರ್ಡಿಬಿ ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರೌಢ ಶಾಲೆಯ ಕಟ್ಟಡ ಉದ್ಘಾಟಿಸಿ ಮಾತನಾಡಿ, ಈ ಗ್ರಾಮದಲ್ಲಿನ ಯಾವುದೇ ಸಮಸ್ಯೆಗಳಿದ್ದರೂ ಗಮನಕ್ಕೆ ತನ್ನಿ, ಅವುಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿ, ನಮ್ಮ ತಂದೆಗೆ ನೀಡಿದಂತೆ ಸದಾಕಾಲ ನನಗೂ ಸಹಕಾರ ನೀಡುವಂತೆ ತಿಳಿಸಿದರು.
ದೊಡ್ಡ ದೇಸಾಯಿ ಮಾತನಾಡಿ, ನಮ್ಮ ಗ್ರಾಮಕ್ಕೆ ರಾಜಾ ವೆಂಕಟಪ್ಪ ನಾಯಕ ಅವರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ, ನಾವು ಕೂಡ ಸದಾಕಾಲ ಆರ್.ಕೆ.ಎನ್ ಕುಟುಂಬದೊಂದಿಗೆ ಇರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡ ವೆಂಕಟೇಶ ಬೇಟೆಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ, ಮುಖಂಡರಾದ ರಾಜಾ ವಾಸುದೇವ ನಾಯಕ, ರಾಜಾ ಕುಮಾರ ನಾಯಕ, ಟಿಹೆಚ್ಓ ಡಾ.ಆರ್.ವಿ.ನಾಯಕ, ಗುಂಡಪ್ಪ ಸೋಲಾಪುರ, ರಾಜಶೇಖರ ಪಾಟೀಲ್ ವಜ್ಜಲ್, ರಮೇಶ ದೊರೆ ಆಲ್ದಾಳ, ವೆಂಕಟೇಶ ಹೊಸ್ಮನಿ, ನಿಂಗರಾಜ ಬಾಚಿಮಟ್ಟಿ, ಭೀಮರಾಯ ಮೂಲಿಮನಿ, ಮಾನಪ್ಪ ಶಹಾಪುರಕರ್, ಸುವರ್ಣ ಎಲಿಗಾರ, ಕಾಳಪ್ಪ ಕವಾತಿ, ಶ್ರೀನಿವಾಸ ನಾಯಕ ದೊರೆ, ನಾಸಿರ್ ಕುಂಡಾಲೆ, ಮಹಿಬೂಬ ಒಂಟಿ, ಕೃಷ್ಣಾ ಜಾದವ್, ಶಿವರಾಯ ಕಾಡ್ಲೂರ, ಪಿಡಬ್ಲ್ಯಂಡಿ ಎಡಿ ಎಸ್.ಜಿ.ಪಾಟೀಲ್ ಸೇರಿದಂತೆ ಎಸ್ಡಿಎಮ್ಸಿ ಅಧ್ಯಕ್ಷರು, ಸದಸ್ಯರು, ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕ್ರೀಡೆಯಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ ಹಾಗೂ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.







