ಯಾದಗಿರಿ | ಸಂಘಟನೆಗಳಲ್ಲಿ ಯುವಕರ ಪಾತ್ರ ಮಹತ್ವ : ಶಿವಪುತ್ರ ಜವಳಿ
ಯಾದಗಿರಿ : ಯುವಕರೆಲ್ಲರೂ ಸಂಘಟಿತರಾಗಿ ಸಮಾಜಕ್ಕಾಗಿ ಹಗಲು ರಾತ್ರಿ ಎನ್ನದೆ ದುಡಿಯಬೇಕು ಸಂಘಟನೆ ಮತ್ತು ಸಮಾಜದ ಅಭಿವೃದ್ಧಿಗೆ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಹೇಳಿದ್ದಾರೆ.
ಶುಕ್ರವಾರ ಹಳೆ ಪ್ರಾವಸಿ ಮಂದಿರದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡಾ.ಬಾಬಾ.ಸಾಹೇಬರು ತೋರಿಸಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ. ಆಗ ಮಾತ್ರ ಸಮಾಜ ಮತ್ತು ಸಂಘಟನೆ ಸದೃಢವಾಗಿ ಬಲಪಡಿಸಲು ಸಾಧ್ಯ ಎಂದು ಹೇಳಿದರು.
ಚಂದಪ್ಪ ಮುನಿಯಪ್ಪನ್ನೋರ ಮಾತನಾಡಿ, ಸಮಾಜ ಅಭಿವೃದ್ಧಿ ಮತ್ತು ಸದೃಢವಾಗಿ ಬೆಳೆಯಲು ನಮ್ಮ ಸಂಘಟನೆಯ ಕಾರ್ಯಕರ್ತರು ಶ್ರಮಿಸಬೇಕು. ನಮ್ಮ ಸಂಘಟನೆ ದಲಿತರಿಗೆ ಮಾತ್ರ ಸೀಮಿತವಲ್ಲ ಇಡೀ ಶೋಷಿತ ಮತ್ತು ಧಮನಿತರ ಸಮಾಜಕ್ಕೂ ಸೀಮಿತ. ದಲಿತ ಸಂಘರ್ಷ ಸಮಿತಿ ಬಡವರಿಗೆ, ದಲಿತರಿಗೆ ಅನ್ಯಾಯ ಆಗದಂತೆ ನಡೆಯಬೇಕೆಂದು ಹೇಳಿದರು.
ಯಾದಗಿರಿ ಉಪವಿಭಾಗಿ ಸಂಚಾಲಕರಾಗಿ ಮರಿಯಪ್ಪ ಕ್ರಾಂತಿ, ವಡಗೇರಾ ಉಸ್ತುವಾರಿ ಮತ್ತು ಸಂಚಲಕರಾಗಿ ದೊಡ್ಡಪ್ಪ ಕಾಡಮಗೇರ, ಸಂಘಟನಾ ಸಂಚಾಲಕರಾಗಿ ಮಲ್ಲಪ್ಪ ಖಾನಾಪುರ, ಚನ್ನಬಸು ಗುರುಸುರಂ, ಭೀಮಶಂಕರ್ ಗುಂಡಳ್ಳಿ, ಬನ್ನಪ್ಪ ಕುರಕುಂದಿ, ತಾಲ್ಲೂಕು ಖಜಾಂಚಿಯಾಗಿ ಹೊನ್ನಯ್ಯ ಪೂಜಾರಿ, ಕಾರ್ಯದರ್ಶಿಯಾಗಿ ಮರಿಯಪ್ಪ ಐಕೂರ, ಮೌನೇಶ್ ಬೊಮ್ನಳ್ಳಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಶಿವಲಿಂಗ ಹಸನಾಪುರ, ರಂಗಸ್ವಾಮಿ ಕೊಂಕಲ್, ಬಲಭೀಮ ಬೇವನಹಳ್ಳಿ, ಶರಬಣ್ಣ ಎಂ.ದೋರನಹಳ್ಳಿ, ಮರೆಪ್ಪ ಕ್ರಾಂತಿ, ಸಂತೋಷ್ ಗುಂಡಳ್ಳಿ, ನಾಗರಾಜ್ ಕೊಡಮನಹಳ್ಳಿ, ಸಿದ್ದಪ್ಪ ಕೊಡಮನಹಳ್ಳಿ, ನಾಗಪ್ಪ ಹಳಿ ಸಾಗರ, ಪುರುಷೋತ್ತಮ ಬಬಲಾದಿ, ಸೇರಿದಂತೆ ಅನೇಕರು ಇದ್ದರು.