ಯಾದಗಿರಿ | ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸುವಂತೆ ಜೈ ಕರವೇ ಆಗ್ರಹ
ಯಾದಗಿರಿ : ನಗರದಲ್ಲಿ ಟ್ರಾಫಿಕ್ಸ್ ಸಿಗ್ನಲ್ ಗಳು ಇದ್ದು ಇಲ್ಲದಂತಾಗಿದೆ ಹಾಗಾಗಿ ಕೂಡಲೇ ನಗರದ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಅಳವಡಿಸುವಂತೆ ಸಂಚಾರಿ ಪೊಲೀಸ್ ಆರಕ್ಷಕ ಉಪನಿರೀಕ್ಷಕರಿಗೆ ಜೈ ಕರವೇ ಸಂಘಟನೆಯಿಂದ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಜೈ ಕರವೇ ಜಿಲ್ಲಾಧ್ಯಕ್ಷ ಸಂಗಮೇಶ ಭೀಮನಳ್ಳಿ ಮಾತನಾಡಿ, ಯಾದಗಿರಿ ನಗರದ ಸುಭಾಷ್ ವೃತ್ತ, ಶಾಸ್ತ್ರಿ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಗಳಿದ್ದು, ಆದರೆ ಅವು ಕಾರ್ಯನಿರ್ವಹಿಸುತ್ತಿಲ್ಲಇದರಿಂದ ವಾಹನಗಳ ಅಪಘಾತ, ಸಂಚಾರಕ್ಕೆ ಅಡೆ ತಡೆ ಜಿಲ್ಲೆಯಲ್ಲಿ ಉಂಟಾಗುತ್ತಿದೆ ಎಂದು ಹೇಳಿದರು.
ಯಾದಗಿರಿಯ ಪ್ರಮುಖ ನಗರಗಳಾದ ಗಂಜ್ ಏರಿಯಾ, ಗಾಂಧಿ ವೃತ್ತ, ಕನಕ ವೃತ್ತ, ವಾಲ್ಮೀಕಿ ವೃತ್ತ, ಹಳೆ ಮತ್ತು ಹೊಸ ಬಸ್ ನಿಲ್ದಾಣ, ಹತ್ತಿಕುಣಿ ರಸ್ತೆ ಸೇರಿದಂತೆ ಇನ್ನು ಪ್ರಮುಖ ಮುಖ್ಯ ರಸ್ತೆಗಳಲ್ಲಿ ಹೆಚ್ಚಿನ ಸಾರ್ವಜನಿಕರು ಇರುವ ಕಡೆ ಟ್ರಾಪಿಕ್ ಸಿಗ್ನಲ್ಗಳು/ ಸಿಸಿ ಕ್ಯಾಮೆರಾಗಳು ಕಡ್ಡಾಯವಾಗಿ ಆಳವಡಿಸಬೇಕು, ಏಕೆಂದರೆ ಇಲ್ಲಿ ವಾಹನ ದಟ್ಟಣೆ ಜಾಸ್ತಿ ಇದ್ದು, ಅತಿ ವೇಗವಾಗಿ ವಾಹನ ಚಲಾಯಿಸುವರಿಗೆ ಕಡಿವಾಣ ಹಾಕಬೇಕು.
ಯಾದಗಿರಿಯಲ್ಲಿ ವಾಹನಗಳ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು, ಕಳ್ಳತನ ತಡೆಯಲು ಸಿ.ಸಿ. ಕ್ಯಾಮರಾ ಅಳವಡಿಸುವುದು ಅಗತ್ಯವಿದೆ. ಸಿಗ್ನಲ್ ಇರುವ ಜಾಗದಲ್ಲಿ ಕಡ್ಡಾಯವಾಗಿ ಪೊಲೀಸರನ್ನು ನಿಯೋಜಿಸುವಂತೆ ಮನವಿ ಸಲ್ಲಿಸಲಾಯಿತು.
ಒಂದು ವೇಳೆ ವಿಳಂಬ ನೀತಿ ಅನುಸರಿಸಿದ್ದಲ್ಲಿ ತಮ್ಮ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ಲಿಂಗರಾಜ್ ಅಂಬಿಗರ್, ಕಾಶೀನಾಥ್ ಕೋಟಿಮನಿ,ಸಾಗರ್ ಚಿಂತನಳ್ಳಿ, ಮಲ್ಲು ಗೊಶಿ, ಅಭಿ ಸ್ಟೇಷನ್, ಶಂಕರ್ ಸಾಗರ್ ಇದ್ದರು.