ಯಾದಗಿರಿ | ಜಯ ಕರ್ನಾಟಕ ರಕ್ಷಣಾ ಸೇನೆ ಸುರಪುರ ನೂತನ ನಗರ ಘಟಕ ಪಧಾದಿಕಾರಿಗಳ ನೇಮಕ

ಯಾದಗಿರಿ : ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಜಲ್ಲಪ್ಪನವರ ಆದೇಶದ ಮೇರೆಗೆ ಜಿಲ್ಲಾ ಕಾರ್ಯಧ್ಯಕ್ಷರಾದ ಶರಣು ಬೈರಿಮರಡಿ ಹಾಗೂ ಸುರಪುರ ತಾಲೂಕಾಧ್ಯಕ್ಷರಾದ ಮಲ್ಲು ನಾಯಕ ಕಬಡಗೇರಾ ಇವರ ನೇತೃತ್ವದಲ್ಲಿ ನೂತನ ನಗರ ಘಟಕ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಕಾರ್ಯಧ್ಯಕ್ಷ ಶಿವರಾಜ ವಗ್ಗರ ಮಾತನಾಡಿ, ಕನ್ನಡ ನಾಡು, ನುಡಿ, ಜಲ, ನೆಲ ವಿಷಯ ಬಂದಾಗ ಎಲ್ಲರೂ ಒಗ್ಗೂಡಿ ಹೋರಾಟ ಮಾಡೋಣ ನಮ್ಮ ಸಂಘಟನೆಯು ಸದಾ ನ್ಯಾಯದ ಪರ ಅನ್ಯಾಯದ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಬಂದಿದೆ. ಅದೇ ರೀತಿಯಾಗಿ ಇನ್ನು ಮುಂದೆ ಎಲ್ಲಾ ನೂತನ ಪದಾಧಿಕಾರಿಗಳು ಸಂಘಟಕರಾಗಿ ನ್ಯಾಯದ ಪರವಾಗಿ ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡುತ್ತಾ ಸಂಘಟನೆಯನ್ನು ಇನ್ನೂ ಎತ್ತರಕ್ಕೆ ಬೆಳೆಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿಯಾದ ಕೃಷ್ಣ ಹಾವಿನ ಬಾದ್ಯಪುರ, ಆಟೋ ಚಾಲಕರ ಘಟಕದ ಅಧ್ಯಕ್ಷರಾದ ಹನುಮಂತ ಬಂಡಾರಿ, ಮಂಜು ಸಂಗಟಿ, ಪಿಡ್ಡಪ್ಪ ಹೊಸಮನಿ,ಮುರುಳಿದರ ಅಂಬುರೆ, ವಿಶ್ವ ಟರ್ಕಿ,ನಿಂಗನಗೌಡ ಗೌಡೂರ್ ಇನ್ನಿತರರು ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳು :
ಅಧ್ಯಕ್ಷರಾಗಿ ಶಿವಕುಮಾರ ಗಾಜಲದಿನ್ನಿ, ಉಪಾಧ್ಯಕ್ಷರಾಗಿ ವೀರೇಶ ಆಡಿನ್ ರತ್ತಾಳ, ಮೌನೇಶ್ ಕಟ್ಟಿಮನಿ ಪ್ರಧಾನ ಕಾರ್ಯದರ್ಶಿ ಮಂಜು ಪಾಟೀಲ್ ಖಜಾಂಚಿ ಸಿದ್ದು ಮಡಿವಾಳ, ಸಂಘಟನಾ ಕಾರ್ಯದರ್ಶಿ ಪ್ರವೀಣ್ ವಿಭೂತೆ, ಜಂಟಿ ಕಾರ್ಯದರ್ಶಿ ಸಿದ್ದು ತುಮಕೂರು ಸಹ ಕಾರ್ಯದರ್ಶಿ ಪರಶುರಾಮ ಕಟ್ಟಿಮನಿ, ಸಂಘಟನಾ ಸಂಚಾಲಕ ಶಿವು ಮುಡ್ಡ, ಕಾರ್ಯದರ್ಶಿ, ನಾಗಲಿಂಗ ಕರಿಗೆರ್, ಸಹ ಕಾರ್ಯದರ್ಶಿ ಚನ್ನಬಸವ ಗುತ್ತಿ ದಿವಳಗುಡ್ಡ ವಾರ್ಡ್ ನಂ 29ರ ಅಧ್ಯಕ್ಷ ಶ್ರೀ ಶೈಲಾ ಕುರಿ ಮಂಗಳ ಬಜಾರ್ ವಾರ್ಡ್ ನಂ 25ರ ಅಧ್ಯಕ್ಷ : ಮಹೇಶ್ ಎಲಿತೋಟದ್ ಸಹ ಸಂಘಟನಾ ಕಾರ್ಯದರ್ಶಿ ನಾಗರಾಜ್ ಅವರನ್ನು ಆಯ್ಕೆ ಮಾಡಲಾಯಿತು.







