ಯಾದಗಿರಿ | ಶಿವಯೋಗಿ ಸಿದ್ದರಾಮೇಶ್ವರರ ಜಯಂತೋತ್ಸವ ಕಾರ್ಯಕ್ರಮ

ಯಾದಗಿರಿ : 12ನೇ ಶತಮಾನದ ಶರಣರ ತತ್ವಗಳನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಶರಣರು ಮಾಡಿರುವ ಕಾಯಕ ಇಂದಿಗೂ ಸಾರ್ಥಕವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಶರಣಬಸಪ್ಪ ಕೋಟ್ಟೆಪಗೋಳ ಅವರು ಹೇಳಿದರು.
ಇಂದು ನಗರದ ಪದವಿ ಮಹಾವಿದ್ಯಾಲದಲ್ಲಿ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಯೋಗಿ ಸಿದ್ದರಾಮೇಶ್ವರ ಅವರ ಕುರಿತು ವಿಶೇಷ ಉಪನ್ಯಾಸ ನೀಡಿ, ದೇವಿಂದ್ರಪ್ಪ ಧೋತ್ರ ಕಿಲ್ಲನಕೇರಾ ರವರು ಮಾತನಾಡಿ, ಕರುನಾಡಿನ ಸಮಾಜದಲ್ಲಿ12ನೇ ಶತಮಾನದಲ್ಲಿ ಈ ನಾಡಿಗೆ ಅಭೂತಪೂರ್ವ ಸೇವೆಯನ್ನು ಮಾಡಿ ನಾಡಿನ ಎಲ್ಲಾ ಜನತೆಯ ಮನವನ್ನು ಗೆದ್ದ ಪವಾಡ ಪುರುಷರಾದ 12ನೇ ಶತಮಾನದ ಶಿವಯೋಗಿ ಸಿದ್ದರಾಮೇಶ್ವರರು ಭೋವಿ, ವಡ್ಡರ ಜನಾಂಗದ ರಾಜಕೀಯ ಮತ್ತು ಸಾಮಾಜಿಕವಾಗಿ ಧರ್ಮಗುರುವಾಗಿ ಧರ್ಮಗಳನ್ನು ಆಚರಿಸಿ ಸಮಾಜದ ಜನತೆಗೆ ಸಕಲ ಲೇಸನ್ನು ಬಯಸಿದ ಪುರುಷರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತಾರದೇವಿ ಮಠಪತಿ, ಭೋವಿ ಸಮಾಜದ ಜಿಲ್ಲಾಧ್ಯಕ್ಷ ನಾಗಪ್ಪ ಬೆನಕಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶರಣು ಯಾಳಗಿ ಪ್ರಾರ್ಥಿಸಿದರು, ಪ್ರೊ.ರಮೇಶ್ ಯಾಳಗಿ ಸ್ವಾಗತಿಸಿದರು, ಭೀಮರಾಯ ಕೊಟ್ರಿಗಿ ವಂದಿಸಿದರು.







