ಯಾದಗಿರಿ | ಮಿತ್ರಾ ಸೇವಾ ಸಂಸ್ಥೆಯಿಂದ ಕನ್ನಡ ರಾಜ್ಯೋತ್ಸವ
ಯಾದಗಿರಿ : ಮಿತ್ರಾ ಸೇವಾ ಸಂಸ್ಥೆಯ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳ ಹಬ್ಬ ಹಾಗೂ ಸುರಪುರ ಇತಿಹಾಸ ವಿಚಾರ ಸಂಕೀರ್ಣ ಗಿರಿನಾಡಿನ ಮಿತ್ರಾ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜರುಗಿತು.
ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಮಾತನಾಡಿ, ರಾಜ್ಯೋತ್ಸವ ಅಂಗವಾಗಿ ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದ ಮಹನೀಯರ ಕುರಿತ ವಿಚಾರ ಸಂಕೀರ್ಣ ಆಯೋಜಿಸಿರುವುದು ಮಾದರಿಯಾಗಿದೆ ಎಂದರು.
ಸುರಪುರದ ಸಗರ ನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ಕನ್ನಡ ಪ್ರೇಮ ವನ್ನು ಎಲ್ಲರೂ ಬೆಳೆಸಿಕೊಂಡು ಕನ್ನಡ ಪ್ರೇಮ ಮೆರೆಯಬೇಕೆಂದು ಸಲಹೆ ನೀಡಿದರು.
ಗಿರಿನಾಡು ಮಿತ್ರಾ ಗೌರವ ಪ್ರಶಸ್ತಿಯನ್ನು ಬಿಎನ್.ವಿಶ್ವನಾಥ ನಾಯಕ (ಕನ್ನಡ ಪರ ಸಂಘಟನೆ ಕ್ಷೇತ್ರ), ಜಾವೀದ್ ಹುಸೇನ್ ಹವಲ್ದಾರ್ (ಇತಿಹಾಸ), ದಿನೇಶ ಕುಮಾರ (ಆರೋಗ್ಯ), ಅರುಣಕುಮಾರ ಮಾಸನ್ (ಮಾಧ್ಯಮ ಛಾಯಾಗ್ರಾಹಕ), ಸುಧೀರ ಕೋಟೆ (ಮಾದ್ಯಮ), ಬೆಂಜಮಿನ್ ಶಿವನೂರ (ಸಮಾಜಸೇವೆ) ಶಿವು ಬಳಿಚಕ್ರ (ಯವ ಸಾಹಿತ್ಯ) ಇವರಿಗೆ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸುರಪುರ ಸಾಹಿತಿ ಜಾವಿದ್ ಹುಸೇನ್ ಹವಲ್ದಾರ್, ವೇದಿಕೆ ಮೇಲೆ ಕಸಾಪ ಗೌರವ ಕಾರ್ಯದರ್ಶಿ ಸಿದ್ದರಾಜರಡ್ಡಿ, ಶಶಿ ಸುಪರ್ ಬಜಾರ್ ಮಾಲಕರಾದ ಮಲ್ಲಿಕಾರ್ಜುನ ಶಿರಗೋಳ, ಯೇಸುಮಿತ್ರ ಭಾಸ್ಕರ್, ಬಂಗಾರು ರಾಠೋಡ ಮತ್ತಿತರರು ಉಪಸ್ಥಿತರಿದರು.