ಯಾದಗಿರಿ | ಸಂತ ಸೇವಾಲಾಲ್ ಜಯಂತಿ ಆಚರಿಸದೆ ಅಗೌರವ ತೋರಿದ ಕೃ.ಭ.ಜ.ನಿ.ನಿ ಇಲಾಖೆಯ ಅಧಿಕಾರಿಗಳು : ಆರೋಪ

ಕೆಂಭಾವಿ : ಚಾರಿತ್ರಿಕ ಪುರುಷ ಸಂತ ಸೇವಾಲಾಲ್ ಅವರ 286 ನೇ ಜಯಂತಿಯನ್ನು ಸರಕಾರ ಎಲ್ಲಾ ಕಚೇರಿಗಳಲ್ಲಿ ಆಚರಿಸುವಂತೆ ಸರ್ಕಾರದ ಆದೇಶವಿದ್ಧರೂ, ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಬೆಲೆಯನ್ನು ನೀಡದೆ ಅಗೌರವ ತೋರಿರುವ ಘಟನೆ ಪಟ್ಟಣದ ಸಹಾಯ ಕಾರ್ಯಪಾಲಕ ಅಭಿಯಂತರು ಕೃಭಾಜನಿನಿ ಡಿಬಿಸಿ ಉಪ ವಿಭಾಗ ಸಂ 2 ರ ಕಚೇರಿಯಲ್ಲಿ ಶನಿವಾರ ನಡೆದಿದೆ.
ನಾಡಿನಾಧ್ಯಂತ ಸಂತಸೇವಾಲಾಲರ 286 ನೇ ಜಯಂತಿಯನ್ನು ಶನಿವಾರ ಆಚರಿಸಲಾಗಿದ್ದು, ಆದರೆ ಪಟ್ಟಣ ಸಬ್ ಡ್ಯುಜನ್ 2 ಕಚೇರಿಯಲ್ಲಿ ಮಾತ್ರ ಸೇವಾಲಾಲರ ಜಯಂತಿ ಆಚಣೆ ಮಾಡದೆ ಅಧಿಕಾರಿ ಹಾಗೂ ಸಿಬ್ಬಂದಿಗಳು ನಿರ್ಲಕ್ಷ ತೋರಿರುವ ಘಟನೆ ಜರುಗಿದ್ದು, ಇನ್ನೂ ಈ ವಿಷಯ ತಿಳಿಯುತ್ತಲ್ಲೇ ಸಮಾಜದ ಮುಖಂಡರು ಮತ್ತು ದಲಿತ ಮುಖಂಡರು ಕಚೇರಿಗೆ ಆಗಮಿಸಿ ದ್ವಿತಿಯ ಸಹಾಯಕ ದರ್ಜೆ ಅಧಿಕಾರಿಗೆ ತರಾಟಗೆ ತೆಗೆದುಕೊಂಡಿದ್ದಾರೆ.
ಸಂತ ಸೇವಾಲಾಲ್ ಅವರ ಜಯಂತಿಯನ್ನು ಆಚರಿಸುವಂತೆ ಪಟ್ಟುಹಿಡಿದು ಕಚೇರಿಯಲ್ಲಿ ಕುಳಿತರು, ಇನ್ನೂ ಈ ವಿಷಯವು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ಬಂದನಂತರ ಎಚ್ಚೆತ್ತುಕೊಂಡ ಸಿಬ್ಬಂದಿಗಳು ಸೇವಲಾಲ್ ಅವರ ಭಾವಚಿತ್ರವನ್ನು ತೆಗೆದುಕೊಂಡುಬಂದು ಪೂಜೆ ಮಾಡಿ ಜಯಂತಿಯನ್ನು ಆಚರಿಸಿದ್ದಾರೆ.
ಈ ಕುರಿತು ಮಾತನಾಡಿದ ದ್ವಿತೀಯ ದರ್ಜೆ ಸಹಾಯಕ ಅಧಿಕಾರಿಯು ಅನಿವಾರ್ಯ ಕಾರ್ಯಗಳಿಂದ ಇಂದು ಕಚೇರಿಗೆ ಆಗಮಿಸಲು ವಿಳಂಬವಾಗಿದ್ದ , ಕೋಣೆಯ ಕೀ ನನ್ನಲ್ಲಿ ಇರುವುದರಿಂದ ಸಿಬ್ಬಂದಿಗಳು ಸಹ ಜಯಂತಿಯನ್ನು ಆಚರಿಸದಿರುವಂತಾಗಿದೆ ಎಂದು ಹೇಳಿದ್ದಾರೆ.
ನಂತರ ಮಾತನಾಡಿದ ಪ್ರತ್ಯಕ್ಷದರ್ಶಿ ದಲಿತ ಮುಖಂಡ ಧರ್ಮಣ್ಣ ಹೊಸಮನಿ, ಪಟ್ಟಣದ ಸಹಾಯ ಕಾರ್ಯಪಾಲಕ ಅಭಿಯಂತರು ಕೃಭಾಜನಿನಿ ಡಿಬಿಸಿ ಉಪ ವಿಭಾಗ ಸಂ 2ರ ಕಚೇರಿಯಲ್ಲಿ ಸಂತ ಸೇವಲಾಲ್ ಅವರ ಜಯಂತಿಯನ್ನು ಆಚರಿಸುವಲ್ಲಿ ನಿರ್ಲಕ್ಷ ತೋರಿದ್ದಾರೆ ಎಂದು ತಿಳಿದು ಬಂದ ನಂತರ ಕಚೇರಿಗೆ ತೆರಳಿದ ನಾವು ಅಲ್ಲಿನ ಸಬ್ಬಂದಿಗಳನ್ನು ವಿಚಾರಿಸಿದಾಗ ಸಮಯ ಹನ್ನೊಂದು ಗಂಟೆಯಾದರೂ, ಇನ್ನೂ ದ್ವಿತೀಯ ಸಹಾಯಕ ಅಧಿಕಾರಿ ಬಾರದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸದರು. ನಂತರ ನಿರ್ಲಕ್ಷದ ಕುರಿತು ಇಲಾಖೆಯ ಅಧಿಕಾರಿಗೆ ಕರೆ ಮಾಡಿ ತಿಳಿಸಿದ ನಂತರ ದ್ವಿತೀಯ ಸಹಾಯಕ ಅಧಿಕಾರಿ ಕಚೇರಿಗೆ ಆಗಮಿಸಿ ಕೋಣೆಯ ಕೀಲಿಯನ್ನು ತೆರೆದು ಸಿಬ್ಬಂದಿಗಳು ಹಾಜರಾತಿಯನ್ನು ತೆಗೆದು ಕೊಂಡು ನಂತರ ಜಯಂತಿಯನ್ನು ಆಚರಿಸಿದ್ದಾರೆ ಎಂದು ಹೇಳಿದ್ದಾರೆ.
ಸರಕಾರದ ಸೇವೆಯಲ್ಲಿದ್ದು, ಸರಕಾದ ಆದೇಶವನ್ನು ದಿಕ್ಕರಿಸಿ ಸಂತ ಸೇವಾಲಾಲರ ಜಯಂತಿಯನ್ನು ಆಚರಿಸುವಲ್ಲಿ ತಮ್ಮ ಮಂಡುತನವನ್ನು ಪ್ರದರ್ಶಿಸಿರುವ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಅಂದಾಗ ಮಾತ್ರ ಇಂತಹ ಘಟನೆಗಳು ಮರುಕಳಿಸುವುದಿಲ್ಲ.
ಅಶೋಕ ಜಾಧವ್ ಯಾಳಗಿ, ಬಂಜಾರ ಸಮುದಾಯದ ಮುಖಂಡ







