ಯಾದಗಿರಿ | ನಗರಸಭೆಯ ಡೇ-ನಲ್ಮಾ ಯೋಜನೆಯಡಿ ತುಲಿಪ್ ಇಂಟರ್ನ್‌ಶಿಪ್ ಅಭ್ಯರ್ಥಿಗಳಿಗೆ ಲಲಿತಾ ಅನಪೂರ ಅವರಿಂದ ಪ್ರಮಾಣ ಪತ್ರ ವಿತರಣೆ

ಯಾದಗಿರಿ : ನಗರ ಸಭೆಯ ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ 2023-24 ನೇ ಸಾಲಿನ ಡೇ -ನಲ್ಮ್ ಯೋಜನೆ (ತುಲಿಪ್) (TULIP) ಕಾರ್ಯಕ್ರಮದಲ್ಲಿ ದಿ ಹರ್ಬನ್ ಲರ್ನಿಂಗ್ ಇಂಟರ್ನ್‌ಶಿಪ್ ಪ್ರೋಗ್ರಾಂ ಅಡಿಯಲ್ಲಿ ವಿಷಯವಾರು ಅಧ್ಯಯನ ಮಾಡಿ ವರದಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪೂರ ಅವರು ಪ್ರಮಾಣ ಪತ್ರ ವಿತರಿಸಿದರು.
ನಗರ ಪ್ರದೇಶದಲ್ಲಿ ಆಶ್ರಯ ತಾಣವಾಗಿರುವ ನಿರಾಶ್ರಿತರ ಕೇಂದ್ರಗಳು ಯಾದಗಿರಿ ನಗರದ ಒಂದು ವಿಶ್ಲೇಷಣೆ ವಿಷಯಕ್ಕೆ ಬೀರಲಿಂಗಪ್ಪ ಕಿಲ್ಲನಕೇರಾ, ನಗರದ ಪ್ರದೇಶಗಳಲ್ಲಿ ತೃತೀಯ ಲಿಂಗಿಗಳು ಮತ್ತು ಸ್ವಸಹಾಯ ಸಂಘಗಳು ವಿಷಯಕ್ಕೆ ಶಿವರೆಡ್ಡಿ, ಯಾದಗಿರಿ ನಗರದ ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಬದಲಾವಣೆಯಲ್ಲಿ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿಯ ಪಾತ್ರ ವಿಷಯಕ್ಕೆ ಪುಷ್ಪಾ ಬೀರಪ್ಪ, ಮಹಿಳಾ ಸಬಲೀಕರಣದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಪಾತ್ರ ವಿಷಯಕ್ಕೆ ಅಂಬಿಕಾ ಎಂಬುವವರು ವರದಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ರುಖೀಯಾ ಬೇಗಂ, ಪೌರಾಯುಕ್ತ ಉಮೇಶ ಚವ್ಹಾಣ, ಸಮುದಾಯ ಸಂಘಟನಾಧಿಕಾರಿ ಭೀಮಣ್ಣ ಕೆ.ವೈದ್ಯ ಹಾಗೂ ಸಿಆರ್ಪಿರವರು ಉಪಸ್ಥಿತರಿದ್ದರು.







