ಯಾದಗಿರಿ | ಅಸ್ಪೃಶ್ಯತೆ ಪಿಡಿಗು ನಿವಾರಣೆಗೆ ಎಲ್ಲರೂ ಮುಂದಾಗೋಣ : ಆರ್.ಕೆ.ನಾಯಕ

ಸುರಪುರ : ಅಸ್ಪೃಶ್ಯತೆ ಎನ್ನುವುದು ಸಮಾಜಕ್ಕೆ ಅಂಟಿರುವ ದೊಡ್ಡ ಪಿಡುಗಾಗಿದ್ದು, ಇದರ ನಿವಾರಣೆಗೆ ಎಲ್ಲರು ಮುಂದಾಗೋಣ ಎಂದು ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ಮಾತನಾಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಯಾದಗಿರಿ, ಸಮಾಜ ಕಲ್ಯಾಣ ಇಲಾಖೆ ಯಾದಗಿರಿ, ತಾಲೂಕು ಆಡಳಿತ ಸುರಪುರ, ತಾಲೂಕು ಪಂಚಾಯತ್ ಸುರಪುರ, ಸಮಾಜ ಕಲ್ಯಾಣ ಇಲಾಖೆ ಸುರಪುರ ಹಾಗೂ ಮದರ ತೇರೆಸಾ ಗ್ರಾಮೀಣಾಭೀವೃಧ್ಧಿ ಶಿಕ್ಷಣ ಸಂಸ್ಥೆ ಸುರಪುರ ಇವರುಗಳ ವತಿಯಿಂದ ಹಮ್ಮಿಕೊಂಡಿದ್ದ ಅಸ್ಪೃಶ್ಯತೆ ಕುರಿತು ವಿಚಾರ ಸಂಕೀರಣ, ಬೀದಿ ನಾಟಕ ಜನಪದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕರು ಮಾತನಾಡಿ, ದೇಶದಲ್ಲಿ ಹೆಚ್ಚಾಗಿದ್ದ ಅಸ್ಪೃಶ್ಯತೆ ಆಚರಣೆಯನ್ನು ಬುದ್ಧ ಬಸವಣ್ಣ ಅಂಬೇಡ್ಕರರು ನಿರ್ಮೂಲನೆಗೆ ನಿರಂತರ ಶ್ರಮಿಸಿದ್ದಾರೆ. ಅಂಬೇಡ್ಕರರು ಸಂವಿಧಾನದ ಮೂಲಕ ಅಸ್ಪೃಶ್ಯತೆ ನಿವಾರಣಗೆ ಒತ್ತು ನೀಡಿದ್ದು, ಎಲ್ಲರೂ ಸಂವಿಧಾನವನ್ನು ಅರಿತು ನಡೆದಲ್ಲಿ ಸಮಾನತೆಯ ಭಾರತ ನಿರ್ಮಾಣವಾಗಲಿದೆ ಎಂದರು.
ಸರಕಾರ ಅನೇಕ ಯೋಜನೆಗಳ ಮೂಲಕ ಅಸ್ಪೃಶ್ಯತೆ ನಿವಾರಣೆಗೆ ಯೋಜನೆ ರೂಪಿಸಿದೆ, ಆದರೆ ಜನರು ಮುಖ್ಯವಾಗಿ ಅಸ್ಪೃಶ್ಯತೆ ನಿವಾರಣೆಗೆ ಮುಂದಾಗಬೇಕು, ಅಸ್ಪೃಶ್ಯತೆ ಆಚರಣೆ ಮಾಡಿದವರಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಇದೆ ಎನ್ನುವ ಅರಿವನ್ನು ಇಂತಹ ಕಾರ್ಯಕ್ರಮಗಳ ಮೂಲಕ ತಿಳಿಸಲಾಗುತ್ತದೆ ಎಂದರು.
ತಹಶೀಲ್ದಾರ್ ಹುಸೇನಸಾಬ್ ಎ.ಸರಕಾವಸ್, ತಾ.ಪಂ ಇಓ ಬಸವರಾಜ ಸಜ್ಜನ್, ಸಮಾಜ ಕಲ್ಯಾಣಾಧಿಕಾರಿ ಮಹ್ಮದ್ ಸಲೀಂ ಹಾಗೂ ಸಂಪೂನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಸಾಹಿತಿ ಡಾ.ಗಾಳೆಪ್ಪ ಪೂಜಾರಿ, ಹೋರಾಟಗಾರ ರಾಹುಲ್ ಹುಲಿಮನಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಮದರ್ ತೇರೆಸಾ ಗ್ರಾಮೀಣಾಭೀವೃಧ್ಧಿ ಸಂಸ್ಥೆ ಅಧ್ಯಕ್ಷ ಭೀಮರಾಯ ಸಿಂದಗೇರಿ ಮಾತನಾಡಿದರು.
ಕಾರ್ಯಕ್ರಮದಲಿ ನಗರಸಭೆ ಅಧ್ಯಕ್ಷೆ ಹೀನಾ ಕೌಸರ್ ಶಕೀಲ್ ಅಹ್ಮದ್ ಖುರೇಷಿ, ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸ್ಮನಿ, ಡಿಎಸ್ಎಸ್ ಅಂಬೇಡ್ಕರ್ ವಾದ ರಾ.ಸಂ.ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ, ಜಿ.ಸಂ ಮಾಳಪ್ಪ ಕಿರದಳ್ಳಿ, ಡಿಎಸ್ಎಸ್ ಪ್ರೊ.ಬಿ.ಕೆ ಬಣದ ಜಿ.ಸಂ ಶ್ರೀನಿವಾಸ ನಾಯಕ, ಡಿಎಸ್ಎಸ್ ಭೀಮವಾದ ಸಂಚಾಲಕ ಶರಣು ನಾಟೇಕಾರ್, ಡಿಎಸ್ಎಸ್ ಭೀಮವಾದ ಮ.ಒ ರಾಜ್ಯ ಸಂ.ಸಂಚಾಲಕಿ ಮಂಜುಳಾ ಸುರಪುರ, ಶಿವಶರಣಪ್ಪ ವಾಡಿ ಕೆಂಭಾವಿ, ನಗರಸಭೆ ನೈರ್ಮಲ್ಯ ನಿರೀಕ್ಷಿಕ ಗುರುಸ್ವಾಮಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಮದರ್ ತೇರೇಸಾ ಶಿಕ್ಷಣ ಸಂಸ್ಥೆ ಕಲಾವಿದರಿಂದ ಬೀದಿ ನಾಟಕ ಜನಪದ ಕಾರ್ಯಕ್ರಮ ನಡೆಯಿತು.







