ಯಾದಗಿರಿ | ಜ.19 ರಂದು ಮಹಾಯೋಗಿ ವೇಮನ ಜಯಂತಿ : ಮಲ್ಲಣ್ಣ

ಸುರಪುರ : ಜ.19 ರಂದು ಬೆಳಿಗ್ಗೆ ತಾಲೂಕು ಆಡಳಿತದಿಂದ ಮಹಾಯೋಗಿ ವೇಮನ ಅವರ ಜಯಂತಿ ಆಚರಿಸುತ್ತಿದ್ದು, ಕಾರ್ಯಕ್ರಮದ ಅಂಗವಾಗಿ ಸುರಪುರ ನಗರದ ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ದರ್ಬಾರ್ ರಸ್ತೆ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿ ವರೆಗೆ ಬೈಕ್ ರ್ಯಾಲಿ ನಡೆಸಿ, ನಂತರ ಮಹಾಯೋಗಿ ವೇಮನರ ಜಯಂತಿಯಲ್ಲಿ ಪಾಲ್ಗೊಳ್ಳಲಾಗುವುದು ಎಂದು ವೀರಶೈವ ಲಿಂಗಾಯಿತ ರೆಡ್ಡಿ ಸಮುದಾಯದ ಮುಖಂಡ ಮಲ್ಲಣ್ಣ ಸಾಹು ಜಾಲಿಬೆಂಚಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮುದಾಯ, ರೆಡ್ಡಿ ಸಮುದಾಯ ಸೇರಿದಂತೆ ಮಹಾಯೋಗಿ ವೇಮನ ಅವರ ಎಲ್ಲಾ ಅಭಿಮಾನಿಗಳು, ಸರಕಾರಿ ನೌಕರರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಮೆರವಣಿಗೆ ಹಾಗೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.
Next Story





