ಯಾದಗಿರಿ| ಲಾಡ್ಜ್ನಲ್ಲಿ ಉಸಿರುಗಟ್ಟಿಸಿ ವ್ಯಕ್ತಿಯ ಕೊಲೆ

ಸಾಂದರ್ಭಿಕ ಚಿತ್ರ
ಯಾದಗಿರಿ: ನಗರದ ಎಸ್ಡಿಎನ್ ಲಾಡ್ಜ್ನಲ್ಲಿ ತಂಗಿದ್ದ ವ್ಯಕ್ತಿಯೋರ್ವನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ಮೃತರನ್ನು ಹೈದರಾಬಾದ್ ಮೂಲದ ಲಕ್ಷ್ಮಣ್ಣರಾವ್ ಪೆನಮೂರ್ತಿ (52) ಎಂದು ಗುರುತಿಸಲಾಗಿದೆ.
ಸಂಬಂಧಿಕರೊಂದಿಗೆ ಹೈದರಾಬಾದ್ನಿಂದ ಯಾದಗಿರಿಗೆ ಆಗಮಿಸಿದ್ದ ಲಕ್ಷ್ಮಣ್ಣರಾವ್ ಅವರು ಲಾಡ್ಜ್ನಲ್ಲಿ ವಾಸವಾಗಿದ್ದರು. ಈ ವೇಳೆ ಅವರ ಜೊತೆಗಿದ್ದ ಕೆಲವರು ಅವರನ್ನು ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಯಾದಗಿರಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story




