ಯಾದಗಿರಿ | ಮಕ್ಕಳ ಉನ್ನತ ಶಿಕ್ಷಣ ಸುಧಾರಣೆಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಸೂಚನೆ

ಯಾದಗಿರಿ : ಎಸೆಸೆಲ್ಸಿ ಫಲಿತಾಂಶ ಸುಧಾರಣೆಗೆ ಶಾಲಾ ಶಿಕ್ಷಣ ಇಲಾಖೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ವಹಿಸಿರುವ ಕೆಲಸ ಬೇಗನೆ ಮುಗಿಸುವ ಮೂಲಕ ಮಕ್ಕಳ ಉನ್ನತ ಶಿಕ್ಷಣ ಸುಧಾರಣೆಗೆ ಅಧಿಕಾರಿಗಳು ಮಕ್ಕಳಲ್ಲಿ ಆತ್ಮಸ್ಥೆರ್ಯ ತುಂಬಿ ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರ್ ಸೂಚಿಸಿದರು.
ಇಲ್ಲಿನ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಯಾದಗಿರಿ ಮತಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಮ್ಮ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಶಿಕ್ಷಣ ಇಲಾಖೆ ಬಗ್ಗೆ ಮಾಹಿತಿ ಪಡೆಯುತ್ತಿರುವಾಗ ಓರ್ವ ಅಧಿಕಾರಿ ಈ ಕುರಿತು ವಿಷಯ ಪ್ರಸ್ತಾಪಿಸಿದರು. ಈ ವೇಳೆ ಶಾಸಕರು ಮಾತನಾಡಿ, ಈ ಬಗ್ಗೆ ವಿವಿಧ ಇಲಾಖೆಗಳ ತಲಾ ಒಬ್ಬ ಅಧಿಕಾರಿ ಎರಡು ಶಾಲೆಗಳಿಗೆ ಭೇಟಿ ಅಲ್ಲಿನ ಶಿಕ್ಷಣದ ಗುಣಮಟ್ಟ, ಮಕ್ಕಳ ಹಾಜರಾತಿ ಸೇರಿದಂತೆಯೇ ಎಲ್ಲವೂ ತಿಳಿದುಕೊಂಡು ಸುಧಾರಣೆಗೆ ನೀಡಬೇಕಾದ ಕೆಲವು ಮಹತ್ವದ ಸೂಚನೆಗಳು ನಿಗದಿತ ಸಮಯದಲ್ಲಿ ನೀಡಿ ಬರಲೇಬೇಕು. ಪರೀಕ್ಷೆ ಹತ್ತಿರ ಬರುತ್ತಿವೆ. ತಡ ಮಾಡಬೇಡಿ ಎಂದು ಶಾಸಕರು ಹೇಳಿದರು.
ಯಾದಗಿರಿ ಮತಕ್ಷೇತ್ರ ಸೇರಿದಂತೆಯೇ ಇಡಿ ಜಿಲ್ಲೆಯಲ್ಲಿ ಶಿಶುಗಳ ಹಾಗೂ ಬಾಣಂತಿಯರ ಸಾವು ಆಗದಂತೆಯೇ ಕಟ್ಟಿನಿಟ್ಟಿ ಕ್ರಮ ತೆಗೆದುಕೊಳ್ಳಿ. ಇದು ಹಿಂದುಳಿದ ಮತ್ತು ಹೆಚ್ಚು ಅಕ್ಷರ ಕಲಿಯದವರ ಇರುವವರ ಜಿಲ್ಲೆ. ಇಲ್ಲಿನ ಜನರಿಗೆ ಆರೋಗ್ಯ ಕಾಪಾಡಿಕೊಳ್ಳಲು ಸೂಕ್ತ ಸಲಹೆ ನೀಡಬೇಕೆಂದು ಶಾಸಕರು ಹೇಳಿದರು.
ಕೊಂಕಲ್ ಗ್ರಾಮದ ಬಿಸಿಎಂ ಹಾಸ್ಟೇಲ್ ಗೆ ಒಂದು ವಾರದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ತಮ್ಮ ಮತಕ್ಷೇತ್ರದ ವ್ಯಾಪ್ತಿಯಲ್ಲಿ 49 ಅಂಗನವಾಡಿ ಕ್ಷೇತ್ರಗಳಿಗೆ ಸ್ವತಃ ಕಟ್ಟಡವಿಲ್ಲದ ಬಗ್ಗೆ ಅಧಿಕಾರಿಗಳು ಹೇಳಿದಾಗ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ನಿವೇಶನದ ವ್ಯವಸ್ಥೆ ಮಾಡಿ ಕಟ್ಟಡ ಕಟ್ಟಿಕೊಡಲಾಗುವುದೆಂದರು.
ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗುವ ಆಹಾರ ಪದಾರ್ಥಗಳ ಸ್ಯಾಂಪಲ್ ತಮಗೆ ತಲುಪಿಸಿ, ಕಳಪೆ ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ ಪರಿಶೀಲಿಸಲಾಗುವುದೆಂದು ಶಾಸಕರು ಅಧಿಕಾರಿಗಳಿಗೆ ಹೇಳಿದರು.
ಹೀಗೆ ವಿವಿಧ ಇಲಾಖೆಗಳ ಪ್ರಗತಿ ಬಗ್ಗೆ ಶಾಸಕರು ಮಾಹಿತಿ ಪಡೆದರು.







