ಯಾದಗಿರಿ| ನಾಗಪುರ ದೀಕ್ಷಾಭೂಮಿ ಯಾತ್ರೆಗೆ ಜಿಲ್ಲಾಧಿಕಾರಿಯಿಂದ ಹಸಿರು ನಿಶಾನೆ

ಯಾದಗಿರಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ್ದರ ಹಿನ್ನಲೆಯಲ್ಲಿ, ಮಹಾರಾಷ್ಟ್ರದ ನಾಗಪುರದ ದಿಕ್ಷಾಯಾತ್ರೆಗೆ ಜಿಲ್ಲೆಯಿಂದ ತೆರಳಿರುವ ಯಾತ್ರಿಗಳ ಬಸ್ ಗಳಿಗೆ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಎಲ್ಲ ಯಾತ್ರಿಕರಿಗೆ ಶುಭ ಕೋರಿದರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸವ ಅಧಿಕಾರಿ ಬೇಬಿ, ಸಮಾಜದ ಮುಖಂಡರಾದ ಮರೆಪ್ಪ ಚಟ್ಟೆರ್ಕರ್, ಸೈದಪ್ಪ ಕೊಲುರ್, ಕಾಶಿನಾಥ್ ನಾಟೇಕರ್, ವೆಂಕೋಬ ಕಟ್ಟಿಮನಿ, ಅನಿಲ ಅನ್ವರ್ ಹಾಗೂ ಇತರೆ ಸಾರ್ವಜನಿಕರು ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಿಲ್ಲೆಯಿಂದ ನಾಗಪುರ (ಮಹಾರಾಷ್ಟ ) ದೀಕ್ಷಾ ಯಾತ್ರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿರುವ 115 ಯಾತ್ರಿಕರು ಮೂರು ಬಸ್ ಗಳ ಮೂಲಕ ಯಾದಗಿರಿಯಿಂದ ಮಹಾರಾಷ್ಟ್ರದ ನಾಗಪುರ ದೀಕ್ಷಾ ಭೂಮಿಗೆ ಭೇಟಿ ನೀಡಲಿದ್ದಾರೆ.




