ಯಾದಗಿರಿ | ಎನ್‌ಎಸ್‌ಎಸ್ ವಾರ್ಷಿಕ ಶಿಬಿರ ಉದ್ಘಾಟನೆ
ವಿದ್ಯಾರ್ಥಿಗಳು ಹೆತ್ತವರ ಋಣ ತೀರಿಸಬೇಕು: ನಿಂಗಪ್ಪ ನಾಯಕ

ಸುರಪುರ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಹೆತ್ತವರನ್ನು ಯಾವತ್ತೂ ಮರೆಯದೆ ಅವರ ಋಣವನ್ನು ತೀರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ನಿಂಗಪ್ಪ ನಾಯಕ ಬಿಜಾಸಪುರ ಹೇಳಿದರು.
ರಂಗಂಪೇಟೆಯ ಡಾ:ಬಿ.ಆರ್.ಅಂಬೇಡ್ಕರ್ ಪ್ರಥಮ ದರ್ಜೆ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ವತಿಯಿಂದ ರಾಯಚೂರು ಮಹರ್ಷಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾಲಯದ ಸಹಯೋಗದೂಂದಿಗೆ ಕರ್ನಾಟಕ ಪ್ರೌಢಶಾಲೆ ಕೃಷ್ಣಾಪುರದಲ್ಲಿ ಏರ್ಪಡಿಸಿದ್ದ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಿಜಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಹಣಮಂತ, ಹೊನ್ನಪ್ಪ ನಾಯಕ್, ಡಾ.ಉಮಾದೇವಿ ದಂಡೋತಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಈಶ್ವರಪ್ಪ ತಳವಾರ, ಡಾ.ಬಿ.ಆರ್.ಅಂಬೇಡ್ಕರ್ ಪ್ರಥಮ ದರ್ಜೆ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ನಾಗಣ್ಣ ಆರ್ ಪೂಜಾರಿ ಮಾತನಾಡಿದರು.
ಈ ವೇಳೆ ಶಂಕರಪ್ಪ ಮಂಗ್ಯಾಳ, ತಿರುಪತಿ ನೀರಡಗಿ,ಮಂಜುಳಾ ಅಕ್ಕರಕಿ, ಬಸವರಾಜ ಮಾಲಿ ಪಾಟೀಲ, ಹೂನ್ನಪ್ಪ ತೇಲ್ಕರ, ಶರಣಪ್ಪ ಆಲ್ದಾಳ, ರಾಘವೇಂದ್ರ ನಾಯಕ, ಇಬ್ರಾಹಿಂ ಕೋಲಾರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.