ಯಾದಗಿರಿ | ತಂದೆ-ತಾಯಿಯ ಪುಣ್ಯಸ್ಮರಣೆ ಪುಣ್ಯದ ಕೆಲಸ : ಶಾಸಕ ತುನ್ನೂರು

ಯಾದಗಿರಿ : ಜನ್ಮ ನೀಡಿದ ತಂದೆ-ತಾಯಿಯೇ ಆದರ್ಶ ದೇವರು, ಅವರ ಪುಣ್ಯಸ್ಮರಣೆ ಮಾಡುವುದು ಪುಣ್ಯದ ಕೆಲಸ ಎಂದು ಯಾದಗಿರಿ ಮತಕ್ಷೇತ್ರದ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಅವರು ತಿಳಿಸಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬುದ್ಧವಾಸಿ ಹೊನ್ನಮ್ಮ, ಬುದ್ಧವಾಸಿ ಭಾಗಪ್ಪ ಅನವಾರ ಅವರ ಪುಣ್ಯಸ್ಮರಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಅನವಾರ ಕುಟುಂಬ ಸಾಮಾಜಿಕ ಕಳಕಳಿ ಇಟ್ಟುಕೊಂಡು ಯಾದಗಿರಿ ಜನರ ಸೇವೆ ಮಾಡಿಕೊಂಡು ಬಂದಿದ್ದಾರೆ. ರಕ್ತ ಶಿಬಿರ ಜೊತೆಗೆ ಸಮಾಜ ಸೇವೆ ಕೂಡ ಮಾಡುತ್ತಿದ್ದಾರೆ ಎಂದು ಹೇಳಿದರು.
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುದ್ದಿಮೂಲ ಪತ್ರಿಕೆಯ ಸಂಪಾದಕರಾದ ಬಸವರಾಜ ಸ್ವಾಮಿ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಿ ಅರ್ಥಪೂರ್ಣವಾಗಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ನಿವೃತ್ತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ಶಿವಶರಣಪ್ಪ ಅನವಾರ, ಯಾದಗಿರಿ ತಹಶೀಲ್ದಾರ ಸುರೇಶ್ ಅಂಕಲಗಿ, ದಲಿತ ಮುಖಂಡ ಮರೆಪ್ಪ ಚಟ್ಟೇರಕರ್, ನಗರ ಸಭೆ ಸದಸ್ಯೆ ಬಸಮ್ಮ ಮಹೇಶ್ ಕುರಕುಂಬಳಕರ್, ಮೋನಪ್ಪ ಅನವಾರ, ಕೈಲಾಸ ಅನವಾರ, ಮತ್ತು ಸಮಾಜದ ಮುಖಂಡರು ಸೇರಿದಂತೆ ಅನೇಕರು ಭಾಗವಹಿಸಿದರು.
ಬುದ್ಧವಾಸಿ ಹೊನ್ನಮ್ಮ, ಬುದ್ಧವಾಸಿ ಭಾಗಪ್ಪ ಅನವಾರ ಅವರ ಪುಣ್ಯಸ್ಮರಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ 40 ಕ್ಕೂ ಹೆಚ್ಚು ಜನರು ಸ್ವಇಚ್ಛೆಯಿಂದ ರಕ್ತದಾನ ಮಾಡಿದರು.







