ಯಾದಗಿರಿ | ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ನೇಮಕ

ಯಾದಗಿರಿ : ಸುರಪುರ ನಗರದ ರಂಗಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ, ಚುನಾವಣಾಧಿಕಾರಿ ಸಿದ್ದಣ್ಣ ಹೊಸಗೌಡರ್, ಸಹಾಯಕ ಚುನಾವಣಾಧಿಕಾರಿ ಭೀಮರಾಯ ಮಲ್ಲಪ್ಪ, ಬಿಆರ್ಪಿ ಖಾದರ್ ಪಟೇಲ್, ಶರಣಗೌಡ ಪಾಟೀಲ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಅಂಬ್ರೇಶಗೌಡ ಸೋಮರಡ್ಡಿ ಮಂಗಿಹಾಳ ಉಪಸ್ಥಿತರಿದ್ದರು.
ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಶಿಕ್ಷಣ ಇಲಾಖೆಯ ರಾಮಕೃಷ್ಣ ಕಲಬುರಗಿ, ಖಜಾಂಚಿಯಾಗಿ ಪಂಚಾಯತ್ ರಾಜ್ ಇಲಾಖೆಯ ದುರ್ಗಾಶ್ರೀ ಎಚ್.ಮಕಾಶಿ, ರಾಜ್ಯ ಪರಿಷತ್ ಸದಸ್ಯರಾಗಿ ಶಿಕ್ಷಣ ಇಲಾಖೆಯ ಸಿದ್ದಪ್ಪ ಅಗ್ನಿ ಅವರು ನೇಮಕಗೊಂಡರು. ನಿರ್ದೇಶಕರಾಗಿ ನೇಮಕಗೊಂಡಿರುವ ಉಪ ಖಜಾನಾಧಿಕಾರಿ ಸಣ್ಣಕೆಪ್ಪ ಕೊಂಡಿಕಾರ ಗೌರವಾಧ್ಯಕ್ಷರಾಗಿ, ಪದವಿ ಶಿಕ್ಷಣ ಇಲಾಖೆಯ ಬಲಭೀಮರಾಯ ದೇಸಾಯಿ ಹಿರಿಯ ಉಪಾಧ್ಯಕ್ಷರಾಗಿ, ಪಶು ಸಂಗೋಪನಾ ಇಲಾಖೆಯ ಡಾ.ಸುರೇಶ ಹಚ್ಚಡ, ಆರೋಗ್ಯ ಇಲಾಖೆಯ ಮರೆಪ್ಪ ನಾಯಕ ಉಪಾಧ್ಯಕ್ಷರಾಗಿ, ಶಿಕ್ಷಣ ಇಲಾಖೆಯ ಮಹಾಂತೇಶ ಎನ್. ಕಾರ್ಯದರ್ಶಿಯಾಗಿ, ಶಿಕ್ಷಣ ಇಲಾಖೆಯ ಮಲ್ಲಿಕಾರ್ಜುನ, ಭೂಮಾಪನ ಇಲಾಖೆಯ ಸಂತೋಷ ಕಲಕೇರಿ, ಸಮಾಜ ಕಲ್ಯಾಣ ಇಲಾಖೆಯ ಸೋಮಶೇಖರ ಜಂಟಿ ಕಾರ್ಯದರ್ಶಿಗಳಾಗಿ, ಕಂದಾಯ ಇಲಾಖೆಯ ಬಸವರಾಜ ಬೋರಗಿ, ಆರೋಗ್ಯ ಇಲಾಖೆಯ ತಿರುಪತಿ ಸಂಘಟನಾ ಕಾರ್ಯದರ್ಶಿಗಳಾಗಿ, ತೋಟಗಾರಿಕೆ ಇಲಾಖೆಯ ಮಾರುತಿ, ಅರಣ್ಯ ಇಲಾಖೆಯ ಹಣಮಂತ್ರಾಯ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ, ತಾಲ್ಲೂಕು ಪಂಚಾಯತ್ ಇಲಾಖೆಯ ಕೆಂಚಪ್ಪ, ಪಂ.ರಾ.ಇ ಇಲಾಖೆಯ ಭೀಮರಾಯ ಕ್ರೀಡಾ ಕಾರ್ಯದರ್ಶಿಗಳಾಗಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಚನ್ನಯ್ಯಸ್ವಾಮಿ ಆಂತರಿಕ ಲೆಕ್ಕ ಪರಿಶೋಧಕರಾಗಿ ನೇಮಕಗೊಳಿಸಲಾಯಿತು.
ಈ ಸಂದರ್ಭದಲ್ಲಿ ನೂತನವಾಗಿ ನೇಮಕಗೊಂಡ ಅಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರಿಗೆ ಹಾಗೂ ಪದಾಧಿಕಾರಿಗಳಾಗಿ ನೇಮಕಗೊಂಡ ಎಲ್ಲಾ ನಿರ್ದೇಶಕರಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅನೇಕ ಜನ ಸದಸ್ಯರು ಹಾಗೂ ಕೆಪಿಎಸ್ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.







