ಯಾದಗಿರಿ | ಪತ್ರಕರ್ತರಿಗೆ ಆರೋಗ್ಯ ನಿಧಿ ಸ್ಥಾಪಿಸಲು ಮನವಿ

ಯಾದಗಿರಿ : ನಗರದಲ್ಲಿ ವಾಸಿಸುತ್ತಿರುವ ಪತ್ರಕರ್ತರ ಕುಟುಂಬದ ಆರೋಗ್ಯದ ದೃಷ್ಠಿಯಿಂದ ನಗರಸಭೆಯಲ್ಲಿ ಆರೋಗ್ಯ ನಿಧಿ ಸ್ಥಾಪಿಸಬೇಕು ಎಂದು ಯಾದಗಿರಿ ಜಿಲ್ಲಾ ಪತ್ರಕರ್ತರ ಸಂಘದವತಿಯಿಂದ ನಗರಸಭೆ ಅಧ್ಯಕ್ಷೆ ಕು.ಲಲಿತಾ ಮೌಲಾಲಿ ಅನಪೂರ ಹಾಗೂ ಪೌರಾಯುಕ್ತರಾದ ಉಮೇಶ ಚವ್ಹಾಣ ರವರಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಮಲ್ಲಪ್ಪ ಸಂಕೀನ್, ಪತ್ರಕರ್ತರಿಗೆ ಆರೋಗ್ಯ ನಿಧಿಯಡಿ ಈ ಹಿಂದೆಯೂ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತಿತ್ತು, ತಾವು ಕೂಡ ಪತ್ರಕರ್ತರ ಬಗ್ಗೆ ವಿಶೇಷ ಕಾಳಜಿ ಇರುವ ಜನನಾಯಕರಾಗಿರುವುದರಿಂದ ಪತ್ರಕರ್ತರ ಕುಟುಂಬದ ಆರೋಗ್ಯ ದೃಷ್ಠಿಯಿಂದ ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ನಗರಸಭೆಯ ವಾರ್ಷಿಕ ಬಜೆಟ್ 2025-26 ಸಾಲಿನ ಆರೋಗ್ಯ ನಿಧಿಯಡಿಯಲ್ಲಿ 5 ಲಕ್ಷ ರೂ. ಗಳನ್ನು ಮೀಸಲಿಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿಮಹೇಶ ಕಲಾಲ, ಉಪಾಧ್ಯಕ್ಷರಾದ ರಾಜು ನಲ್ಲಿಕರ್, ಕಾರ್ಯದರ್ಶಿ ಸೈಯದ್ ಸಾಜೀದ್, ಪತ್ರಕರ್ತರಾದ ರವಿಕುಮಾರ ನರಬೋಳಿ, ಅಮೀನ್ ಹೊಸೂರು, ಗಣೇಶ ಪಾಟೀಲ, ನಾಗರಾಜ, ಶರಬು ಬಿ. ನಾಟೇಕಾರ, ದೇವರಾಜ ವರ್ಕನಳ್ಳಿ, ಭೀರಲಿಂಗ ಪೂಜಾರಿ, ಭೀಮಣ್ಣ ವಡವಟ್, ಭೀಮಣ್ಣ ಮಡಿವಾಳ, ಅರಣ್ ಮಾಸ್ಟರ್ ಇದ್ದರು.







