ಯಾದಗಿರಿ | ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕುರಿಗಳನ್ನು ಬಲಿಕೊಡುವುದು ನಿಷೇಧ : ಡಿಸಿ ಡಾ.ಸುಶೀಲಾ ಬಿ.
ಯಾದಗಿರಿ : ತಾಲೂಕಿನ ಮೈಲಾಪೂರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕುರಿಗಳನ್ನು ಬಲಿಕೊಡುವುದು ನಿಷೇಧ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಆದೇಶ ಹೊರಡಿಸಿದ್ದಾರೆ.
ಯಾದಗಿರಿ ತಾಲೂಕಿನ ಮೈಲಾಪೂರ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯು ಜ.12 ರಿಂದ 18ರವರೆಗೆ ನಡೆಯುವುದರಿಂದ ಜ.14ರ ಮಂಗಳವಾರ ದಂದು ಜಾತ್ರೆಯಲ್ಲಿ ದೇವರ ಪಲಕ್ಕಿಗಾಗಿ ಭಕ್ತರು ಕುರಿಗಳನ್ನು ಬಲಿ ಕೊಡುವ ವಾಡಿಕೆ ಇರುತ್ತದೆ. ಪ್ರಾಣಿ ಹಕ್ಕು ಕಾಯ್ದೆ 1960ನ್ನು ಉಲ್ಲಂಘನೆಯಾಗದಂತೆ ಅವಶ್ಯಕ ಕ್ರಮ ವಹಿಸಬೇಕು.
ಯಾದಗಿರಿ ತಾಲೂಕಿನ ಮೈಲಾಪೂರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ದೇವರ ಪಲ್ಲಕ್ಕಿಗೆ ಕುರಿ ಹಾಗೂ ಪ್ರಾಣಿಗಳನ್ನು ಬಲಿ ಕೊಡುವುದು ಮತ್ತು ಜಾತ್ರೆಯಲ್ಲಿ ಕುರಿ ಮಾರಾಟ, ಖರೀದಿ ಹರಾಜು ಮಾಡುವುದನ್ನು ನಡೆಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ.
ಜಾತ್ರೆಯಲ್ಲಿ ಯಾವುದೇ ಕಾರಣಕ್ಕೂ ಪ್ರಾಣಿ ಹಕ್ಕು ಕಾಯ್ದೆ 1960ನ್ನು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು. ಜಾತ್ರೆಯಲ್ಲಿ ಯಾವುದೇ ಕಾರಣಕ್ಕೂ ಪ್ರಾಣಿ ಹಿಂಸೆ ಪ್ರತಿಭಂದಕ ಕಾಯ್ದೆ 1960ನ್ನು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು, ಜನವರಿ 12ರ ಮಧ್ಯರಾತ್ರಿಯಿಂದ ಜ.18ರ ಮಧ್ಯರಾತ್ರಿಯ ವರೆಗೆ ಗ್ರಾಮಕ್ಕೆ ಹೊಂದಿಕೊಂಡಿರುವ ಹತ್ತಿರ ರಸ್ತೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ಕುರಿಗಳು ಜಾತ್ರೆಯಲ್ಲಿ ಪ್ರವೇಶ ವಾಗದಂತೆ ತಡೆಗಟ್ಟಲಾಗುವುದು.
ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ದೇವರ ಪಲ್ಲಕ್ಕಿಗೆ ಕುರಿ ಹಾಗೂ ಪ್ರಾಣಿಗಳನ್ನು ಬಲಿ ನೀಡುವುದು ಅಥವಾ ಕುರಿಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಸ್ಥಳದ ಜಮೀನನ್ನು, ನಿವೇಶನವನ್ನು ಸರಕಾರದ ವಶಕ್ಕೆ ಪಡೆಯಲಾಗುವುದು. ಕುರಿಗಳನ್ನು ವಾಹನದಲ್ಲಿಯೇ ಮಾರಾಟ ಮಾಡುವುದು ತಿಳಿದುಬಂದರೆ, ಆ ವಾಹನವನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.