ಯಾದಗಿರಿ | ಸರ್ವಜ್ಞರ ಜೀವನ ಸರ್ವರಿಗೂ ದಾರಿದೀಪ : ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್

ಯಾದಗಿರಿ : ಶ್ರೇಷ್ಠ ವಚನಕಾರ ಸರ್ವಜ್ಞ ಅವರ ಜೀವನ ಸರ್ವರಿಗೂ ದಾರಿದೀಪವಾಗಿದೆ ಎಂದು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಹೇಳಿದರು.
ಸೋಮವಾರ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ʼಸರ್ವಜ್ಞರ ಜಯಂತಿ ಕಾರ್ಯಕ್ರಮʼ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಮೂರು ಸಾಲಿನ ವಚನಗಳ ಮೂಲಕವೇ ಇಡಿ ಜನಸಮುದಾಯವನ್ನು ಬಡಿದೆಬ್ಬಿಸುವ ಮೂಲಕ ಜನರಲ್ಲಿ ಅರಿವು ಮೂಡಿಸಿದ್ದರು. ಬದುಕಿನ ಸಾರವನ್ನು ತಮ್ಮ ಮೊನಚು ಮಾತುಗಳಿಂದ ಮತ್ತು ಬರಹಗಳ ಮೂಲಕದ ಸರ್ವಜ್ಞ ಅವರ ವಚನಗಳಿಂದ ತಿಳಿಯಬಹುದಾಗಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಸಹ ಶಿಕ್ಷಕ ದೇವಿಂದ್ರಪ್ಪ ಕರಡಕಲ್, ಸರ್ವಜ್ಞ ಎಂದರೇ ಎಲ್ಲವೂ ಬಲ್ಲವರು ಎಂದರ್ಥ. ಸರ್ವಜ್ಞರು ಲೋಕದ ಆಗುಹೋಗುಗಳ ಮೇಲೆಯೇ ಮೂರು ಸಾಲಿನ ನೇರ ನುಡಿಗಳನ್ನು ಬರೆಯುವ ಮೂಲಕ ಸಮಾಜದ ಓರೆಕೊರೆಗಳನ್ನು ತಿದ್ದಿದ್ದ ಮಹಾನ ವ್ಯಕ್ತಿ ಎಂದು ಬಣ್ಣಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಮುಖಂಡರಾದ ಭೀಮರಾವ ಹಂಗರಗಿ, ಸಮಾಜದಲ್ಲಿ ಒಗ್ಗಟ್ಟು ಮುಖ್ಯ, ಇದರ ಕೊರತೆ ನಮ್ಮಲ್ಲಿ ಬಹಳವಿದೆ. ಸಣ್ಣ ಸಮಾಜಕ್ಕೆ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆಯೇ ವಿವಿಧ ಸೌಲಭ್ಯಗಳು ಸಿಗಬೇಕೆಂದರು.
ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ದೇವಿಂದ್ರಪ್ಪ ದರ್ಶನಾಪುರ, ಗೌರವಾಧ್ಯಕ್ಷ ಹಣಮಂತಪ್ಪ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಬಂಗಾರಪ್ಪ ಯರಗೋಳ್, ನರಸಪ್ಪ ಸೌರಾಷ್ಟಹಳ್ಳಿ, ರಮೇಶ, ಶಿವರಾಜ, ಶ್ರೀಕಾಂತ, ಶಿವಶರಣಪ್ಪ, ಭೀಮರಾಯ, ಗಂಗಾಧರ ಗುಂಡಳ್ಳಿ ಸೇರಿದಂತೆಯೇ ಇತರರಿದ್ದರು.
ಖ್ಯಾತ ಸಂಗೀತ ಕಲಾವಿದ ಚಂದ್ರಶೇಖರ ಗೋಗಿ ಪ್ರಾರ್ಥಿಸಿದರು. ದೇವಿಂದ್ರಪ್ಪ ಯರಗೋಳ ನಿರೂಪಿಸಿದರು. ಆರಂಭದಲ್ಲಿ ಹೊಸಳ್ಳಿ ಕ್ರಾಸನಿಂದ ಕಾರ್ಯಕ್ರಮದ ಸ್ಥಳದವರೆಗೂ ಭವ್ಯ ಮೆರವಣಿಗೆ ನಡೆಯಿತು.







