ಯಾದಗಿರಿ | ಚರಂಡಿ ಸ್ವಚ್ಛಗೊಳಿಸಿದ ಶಾಲಾ ವಿದ್ಯಾರ್ಥಿಗಳು; ಮುಖ್ಯಶಿಕ್ಷಕನ ವಿರುದ್ಧ ಕ್ರಮಕ್ಕೆ ಕರವೇ ಆಗ್ರಹ

ಯಾದಗಿರಿ : ಮುಖ್ಯಶಿಕ್ಷಕರೊಬ್ಬರು ಶಾಲಾ ಮಕ್ಕಳಿಂದ ಕೊಳಚೆ ಬೋರ್‌ವೆಲ್ ಚರಂಡಿಯನ್ನು ಸ್ವಚ್ಚ ಮಾಡಿಸಿದ ಘಟನೆ ಜಿಲ್ಲೆಯ ವಡಗೇರಾ ತಾಲ್ಲೂಕಿನ ಕಾಡಮಗೇರಾ (ಬಿ) ಪಂಚಾಯಿತಿ ವ್ಯಾಪ್ತಿಯ ಕ್ಯಾತನಾಳ ಗ್ರಾಮದ ಸರಕಾರಿ ಶಾಲೆಯಲ್ಲಿ ನಡೆದಿದೆ.
ಶಾಲೆಯಲ್ಲಿ ಮಕ್ಕಳು ಚೆನ್ನಾಗಿ ಓದಿ ಮುಂದೆ ಬಂದು ಪಾಲಕರಿಗೆ ಕೀರ್ತಿ ತರಲಿ ಎನ್ನುವ ಮಹದಾಸೆಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವ ಪಾಲಕರಿಗೆ ಈ ಘಟನೆ ಆಘಾತ ಉಂಟುಮಾಡಿದೆ.
ಮುಖ್ಯಶಿಕ್ಷಕ ಶರಣಪ್ಪ ಬಾಗ್ಲಿ ಅವರು, ಶಾಲೆಯ ಮಕ್ಕಳಿಂದ ಚರಂಡಿ ಸ್ವಚ್ಛತೆಯನ್ನು ಸ್ವತಃ ಮುಂದೆ ನಿಂತು ಮಾಡಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯ ಮುಖ್ಯ ಗುರುಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮು ನಾಯಕ ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿಕ್ಕೆ ಒತ್ತಾಯಿಸಿದ್ದಾರೆ.
Next Story





