ಯಾದಗಿರಿ | ಶ್ರೀಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆಯಿಂದ ವಿಶೇಷ ಕಾರ್ಯಾಗಾರ
ಮಹಿಳೆಯರು ಪ್ರಜ್ಞಾವಂತರಾದಾಗ ಸಮಾನತೆ ಸಾಧ್ಯ : ಡಾ.ರಿಝ್ವಾನಾ ಅಫ್ರೀನ್

ಯಾದಗಿರಿ: ಮಹಿಳೆಯರು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಪ್ರಜ್ಞಾವಂತರಾದಾಗ ಮಾತ್ರ ಸಮಾಜದಲ್ಲಿ ಸಮಾನತೆ ಬರಲು ಸಾಧ್ಯ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ರಿಝ್ವಾನಾ ಅಫ್ರೀನ್ ಹೇಳಿದರು.
ಶ್ರೀ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಮಹಿಳೆಯರಿಗಾಗಿ ವಿಶೇಷ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಮಹಿಳೆಯರು ಅರಿವಿನ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಿದರೆ, ನಗರ ಪ್ರದೇಶದ ಮಹಿಳೆಯರು ಕೆಲಸದ ಒತ್ತಡ ಹಾಗೂ ನಿರ್ಲಕ್ಷ್ಯ ದ ಕಾರಣದಿಂದ ಹಲವಾರು ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ ಎಂದರು.
ಸಮಾಜದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿಯ ಅರಿವನ್ನು ಅದರಲ್ಲೂ ಹೆಣ್ಣು ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅರಿವು ಮೂಡಿಸುವ ಮೂಲಕ ಅವರನ್ನು ಸಮರ್ಥವಾಗಿ ಬೆಳೆಸುವ ಜವಬ್ದಾರಿ ಮಹಿಳೆಯರ ಮೇಲಿದೆ. ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಒತ್ತಡದ ಬದುಕು ಹಾಗೂ ನಿರ್ಲಕ್ಷ್ಯ ಅನೇಕ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದರು.
ಶ್ರೀ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷೆ ಅನ್ನಪೂರ್ಣ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಆರ್.ವೆಂಕಟರೆಡ್ಡಿ, ಚಿಂತಕ ಪ್ರೊ.ಆರ್.ಕೆ.ಹುಡಗಿ, ತನಾರತಿ ಸಾಂಸ್ಕೃತಿಕ ಪ್ರತಿಷ್ಠಾನ ದ ಅಧ್ಯಕ್ಷ ಡಾ.ಸಿದ್ಧರಾಜರೆಡ್ಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕು.ಪಲ್ಲವಿ ಪಾಟೀಲ ಅವರನ್ನು ಸಂಸ್ಥೆಯ ವತಿಯಿಂದ ವಿಶೇಷವಾಗಿ ಸತ್ಕರಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ವೇದಾ ಕರೆಡ್ಡಿ ಮಲ್ಹಾರ,ಶ್ರೀದೇವಿ ಪಾಟೀಲ ಚಾಮನಹಳ್ಳಿ, ಪೂರ್ಣಿಮಾ ಪಾಟೀಲ ತುನ್ನೂರ, ಡಾ.ಶೃತಿ ಹುನಕುಂಟಿ, ಸುರೇಖಾ ಪಾಟೀಲ ಚಟ್ನಳ್ಳಿ, ಡಾ.ಪ್ರೀತಿ ರೆಡ್ಡಿ, ಮಂಜುಳಾ ಪಾಟೀಲ, ದೀಪಾ ಪಾಟೀಲ ಬಂದಳ್ಳಿ, ಸಹನಾ ಪಾಟೀಲ ಕುರಕುಂದಿ, ಡಾ.ನೀಲಮ್ಮ ರೆಡ್ಡಿ, ಡಾ.ಜಯಲಕ್ಷ್ಮಿ ಆರ್ ಮುದ್ನಾಳ, ಶ್ವೇತಾ ಪಾಟೀಲ ಬಿಳ್ಹಾರ,ಡಾ.ಲಕ್ಷ್ಮೀ ಪಾಟೀಲ,ಡಾ.ಪ್ರೀತಿ ಪಾಟೀಲ,ಶಶಿಕಲಾ ಕ್ಯಾತ್ನಾಳ, ವಿದ್ಯಾ ಪಾಟೀಲ ಅರಶಿಣಗಿ, ನಾಗಮ್ಮ ಪಾಟೀಲ ಸೇರಿದಂತೆ ಅನೇಕರು ಇದ್ದರು.
ಹೇಮಾ ಪಾಟೀಲ ಯಕ್ಷಂತಿ ಸ್ವಾಗತಿಸಿದರು. ಅಂಬಿಕಾ ಪಾಟೀಲ ನಿರೂಪಿಸಿದರೆ ಅರಣಾ ಸಿದ್ಧರಾಜರೆಡ್ಡಿ ವಂದಿಸಿದರು.







