ಯಾದಗಿರಿ | ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳ ಧರಣಿ

ಯಾದಗಿರಿ : ಅಮಾನತು ಮಾಡಲಾದ ಕನ್ನಡ ಶಿಕ್ಷಕ ಶಿವರಾಜ ಹಾಗೂ ಹಿಂದಿ ಶಿಕ್ಷಕ ಮುಭಾರಕ್ ಅವರ ಅಮಾನತು ಹಿಂಪಡೆದು, ವಸತಿ ಶಾಲೆಯಲ್ಲಿ ಮೂಲ ಸೌಕರ್ಯ ಒದಗಿಸದ ಪ್ರಭಾರಿ ಪ್ರಾಂಶುಪಾಲರಾದ ನೀಲಮ್ಮ ಹಾಗೂ ವಸತಿ ನಿಯಲ ಪಾಲಕ ರಾಹುತಪ್ಪ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಶಹಾಪುರ ತಾಲ್ಲೂಕಿನ ಬೇವಿನಹಳ್ಳಿ ಕ್ರಾಸ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಬೇವಿನಹಳ್ಳಿಯ ಶಾಲೆಯಿಂದ ಶಹಾಪುರ ತಹಶೀಲ್ದಾರ್ ಕಚೇರಿಯವರೆಗೆ ಸುಮಾರು 8 ಕಿ.ಮೀ. ಮೆರವಣಿಗೆ ಬಂದು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳು ಮೂಲಕ ಮನವಿ ಸಲ್ಲಿಸಿದರು.
ವಾರ್ಡನ್ ಮತ್ತು ಪ್ರಾಂಶುಪಾಲರು ಜಾತಿ ನಿಂಧನೆ ಮಾಡುತ್ತಾರೆ, ಅವಾಚ್ಯ ಶಬ್ದಗಳಿಂದ ನಿಂಧನೆ ಮಾಡುತ್ತಾರೆ, ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಮಾಡಿಲ್ಲ, ಪೌಷ್ಠಿಕ ಆಹಾರ ನಮಗೆ ಒದಗಿಸಲ್ಲ ಸೇರಿದಂತೆ ಹತ್ತಾರು ವಿಷಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸಮಾಜ ಕಲ್ಯಾಣಯ ಉಪ ನಿರ್ದೇಶಕ ಚನ್ನಬಸಪ್ಪ ಅವರು ಮಾತನಾಡಿ, ನಿಮ್ಮ ಬೇಡಿಕೆಗಳನ್ನು ಕ್ರೈಸ್ ಗೆ ಮಾಹಿತಿ ನೀಡಲಾಗಿದೆ. ಕೂಡಲೇ ಆಗ್ರಹಗಳನ್ನು ಈಡೇರಿಸಲಾಗುವುದು ಎಂದು ಪ್ರತಿಭಟನೆ ನಿರತ ವಿದ್ಯಾರ್ಥಿಗಳಿಗೆ ತಿಳಿಸಿದರು.







