ಯಾದಗಿರಿ | ಹಂಚಿನಾಳ ಗ್ರಾಮಸ್ಥರ ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ
ಯಾದಗಿರಿ : ವಡಗೇರಿ ತಾಲ್ಲೂಕಿನ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ನೇತೃತ್ವದಲ್ಲಿ ಗ್ರಾಮಸ್ಥರು ನಡೆಸಿದ ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂದಿಸಿ, ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಶೀಘ್ರ ಸಮಸ್ಯೆ ನಿವಾರಿಸುವ ಭರವಸೆ ನೀಡಿದ್ದಾರೆ.
ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲ, ತಗ್ಗು ಗುಂಡಿಗಳಲ್ಲಿ ನೀರು ನಿಂತು ಗಬ್ಬೆದ್ದು ನಾರುತ್ತಿದ್ದು, ದನಕರುಗಳು ಇದೇ ಹೊಲಸು ನೀರು ಕುಡಿಯುತ್ತಿವೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ನಾಲ್ಕು ಕೊಳವೆಬಾವಿ ಕೊರಿಸಿ ಪೈಪ್‌ಲೈನ್ ಮಾಡಿ ಗ್ರಾಮಸ್ಥರಿಗೆ ಕುಡಿಯುವ ನೀರು ಮತ್ತು ಗ್ರಾಮ ಸ್ವಚ್ಛತೆ ಮಾಡಲು ಜಿಲ್ಲಾಡಳಿತ ಮುಂದಾಗಿರುವುದು ನಮ್ಮ ಹೋರಾಟಕ್ಕೆ ಸಿಕಂತ ಜಯ ಎಂದು ಉಮೇಶ ಕೆ. ಮುದ್ನಾಳ ಹೇಳಿದರು.
ಈ ವೇಳೆ ಗ್ರಾಮಸ್ಥರು ಉಮೇಶ್ ಕೆ.ಮುದ್ನಾಳ್ ಗೆ ಸನ್ಮಾನಿಸಿದರು. ದೊಡ್ಡಪ್ಪಗೌಡ, ದೇವಪ್ಪ, ಭಾಗಪ್ಪ, ಗೋವಿಂದಪ್ಪಗೌಡ, ಶರಣಪ್ಪ ಪೊಪಾ, ಮಲ್ಲಪ್ಪ, ನಿಂಗಪ್ಪ, ಪದ್ಮಣ್ಣ, ದೊಡ್ಡಪ್ಪ, ಚಂದ್ರಾಮ, ನಿಂಗಪ್ಪ, ಹಣಮಂತ್ರಾಯ ಶಿವಪ್ಪ, ಮಲ್ಲಮ್ಮ, ಶಾಂತಮ್, ದೇವಿಂದ್ರಮ್ಮ, ನಿಂಗಮ್ಮ, ದುರುಗಮ್ಮ, ಅಂಬ್ರಮ್ಮ, ದೇವಕೆಮ್ಮ, ದೇವಮ್ಮ, ಬಡ್ಡೆಮ್ಮ, ಮೌಲಮ್ಮ ಸೇರಿ ಅನೇಕರು ಉಪಸ್ಥಿತರಿದ್ದರು.