ಯಾದಗಿರಿ | ತಂದೆ- ತಾಯಿಯ ಮಾರ್ಗದರ್ಶನವೇ ನಮಗೆ ದಾರಿ ದೀಪ : ಶಿವಶರಣಪ್ಪ ಅನವಾರ
ಕುಷ್ಠರೋಗಿಗಳಿಗೆ ಹಾಸಿಗೆ ಹಣ್ಣು, ಹಂಪಲು ವಿತರಣೆ

ಯಾದಗಿರಿ : ಬಡವರಿಗೆ ಮತ್ತು ನಿರ್ಗತಿಕರಿಗೆ ಒಂದು ಸಣ್ಣ ಸಹಾಯ ಮಾಡಿದಾಗ ನಮ್ಮ ಮನಸ್ಸಿಗೆ ಬಹಳಷ್ಟು ಸಂತೋಷ ಮತ್ತು ತೃಪ್ತಿ ತರುತ್ತದೆ ಎಂದು ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ಶಿವಶರಣಪ್ಪ ಅನವಾರ ಹೇಳಿದರು.
ಬುದ್ಧವಾಸಿ ಹೊನ್ನಮ್ಮ ಬುದ್ಧವಾಸಿ ಭಾಗಪ್ಪ ಅನವಾರ ಅವರ ಪುಣ್ಯಸ್ಮರಣೆ ಅಂಗವಾಗಿ ನಗರದ ಕುಷ್ಠರೋಗಿಗಳ ಕಾಲೋನಿಯಲ್ಲಿ ಕುಷ್ಠರೋಗಿಗಳಿಗೆ ಹಾಸಿಗೆ ಮತ್ತು ಹಣ್ಣು ಹಂಪಲು ವಿತರಣೆ ಮಾಡಿ ಮಾತನಾಡಿದ ಅವರು, ಇಲ್ಲಿ ವ್ಯಕ್ತಿ ಮುಖ್ಯವಲ್ಲ ವ್ಯಕ್ತಿತ್ವ ದೊಡ್ಡದು. ಒಳ್ಳೆಯ ಕೆಲಸಗಳು ಸದಾ ನಮ್ಮ ಜೀವನದಲ್ಲಿ ಮುಂದುವರಿಸಿಕೊಂಡು ಬಂದಾಗ ಮಾತ್ರ ನಮ್ಮ ಬದುಕನ್ನು ಇನ್ನಷ್ಟು ಸುಂದರ ಮತ್ತು ಸಿಹಿಯನ್ನಾಗಿಸುತ್ತದೆ. ಇದಕ್ಕೆಲ್ಲ ನಮ್ಮ ತಂದೆ- ತಾಯಿ ಅವರ ಮಾರ್ಗದರ್ಶನ ನಮಗೆ ದಾರಿ ದೀಪವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಭಗವಂತ ಅನವಾರ, ದಲಿತ ಮುಖಂಡ ಮರೆಪ್ಪ ಚಟ್ಟೇರಕರ್, ಮೋನಪ್ಪ ಅನವಾರ, ಡಾ.ಆಶಾ ಭಗವಂತ ಅನವಾರ, ಮಲ್ಲಯ್ಯ ಈಟೇ, ಮಹಿಪಾಲರೆಡ್ಡಿ ಆರೋಗ್ಯ ಇಲಾಖೆ, ಭೀಮಶಪ್ಪ ಕಾಗಿ, ಡಾ.ಕಿರಣ್ ಇದ್ದರು.
Next Story







